ಮಂಗಳೂರು: ಗಣಪನನ್ನು ಭಿನ್ನ ರೂಪದಲ್ಲಿ ನಾವು ಕಾಣುತ್ತೇವೆ. ಆದರೆ ನಗರದ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ಲು ಎಂಬಲ್ಲಿ ಮರದ ಬಳ್ಳಿಯಲ್ಲಿ ಪ್ರಾಕೃತಿಕವಾಗಿ ಗಣಪತಿ ಗೋಚರವಾಗಿದ್ದಾನೆ.
ಮಂಗಳೂರು: ಮರದ ಬಳ್ಳಿಯಲ್ಲಿ ಮೂಡಿದ ಗಣಪ! - Ganesha festival
ಮಂಗಳೂರು ಬಳಿ ಬಳ್ಳಿಯಲ್ಲಿ ಗಣಪನ ಆಕೃತಿ ಮೂಡಿ ಎಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಈಗ ಜನ ಸ್ಥಳಕ್ಕೆ ಭೇಟಿ ನೀಡಿ ಪ್ರಾಕೃತಿಕವಾಗಿ ಮೂಡಿರುವ ಗಣಪನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಾಮಂಜೂರಿನ ಅಮೃತೇಶ್ವರ ದೇವಸ್ಥಾನದ ದಾರಿಯಲ್ಲಿ ಬರುವ ಈಚಲು ಮರವೊಂದಕ್ಕೆ ಬಳ್ಳಿ ಹಬ್ಬಿ ಹೊದಿಕೆಯಂತೆ ಮುಚ್ಚಲ್ಪಟ್ಟು ಗಣಪತಿಯ ರೂಪ ಗೋಚರವಾಗಿದೆ. ಬೃಹದಾಕಾರವಾಗಿ ಬೆಳೆದ ಈ ಮರದ ಬಳ್ಳಿಯ ಪೊದೆಯಲ್ಲಿ ಗಣಪನ ತಲೆ, ದೊಡ್ಡ ಕಿವಿ, ಸೊಂಡಿಲಿನಾಕಾರ ಹಾಗೂ ಡೊಳ್ಳು ಹೊಟ್ಟೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಛಾಯಾಗ್ರಾಹಕ ವಿಶಾಲ್ ವಾಮಂಜೂರು ಎಂಬುವರಿಗೆ ಈ ಪ್ರಾಕೃತಿಕ ಗಣಪ ಮೂರು ವಾರಗಳ ಹಿಂದೆ ಗೋಚರವಾಗಿದ್ದಾನೆ. ನಿನ್ನೆ ಈ ಗಣಪನ 24 ಸೆಕೆಂಡಿನ ವಿಡಿಯೋ ಹಾಗೂ ಫೋಟೋವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ವೈರಲ್ ಮಾಡಲಾಗಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಈ ಪ್ರಕೃತಿದತ್ತವಾದ ಗಣಪನ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.