ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲೇ ಅತ್ಯಂತ ಎತ್ತರದ ಸ್ಥಾನದಲ್ಲಿದೆ. ಇದಕ್ಕೆ ಯಾವುದೇ ಸರ್ಕಾರ ಕಾರಣವಲ್ಲ. ಬದಲಾಗಿ ನಮ್ಮ ಜಿಲ್ಲೆಯ ಹಿರಿಯರು ಕಟ್ಟಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಕಾರಣವೆಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ದ.ಕ.ಜಿಲ್ಲೆಯ ಸಾಧನೆಗೆ ಇಲ್ಲಿನ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳೇ ಕಾರಣ: ಕೋಟಾ ಶ್ರೀನಿವಾಸ್ ಪೂಜಾರಿ - ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಎ.ಜೆ. ಆಸ್ಪತ್ರೆಯು ಒಂದು ವರ್ಷಕ್ಕೆ ನೂರರಿಂದ ಮುನ್ನೂರರಷ್ಟು ವೈದ್ಯರನ್ನು ಸಮಾಜಕ್ಕೆ ನೀಡುತ್ತಿದೆ ಎಂದಾದರೆ ಅದಕ್ಕಿಂತ ಉತ್ತಮವಾದ ಕೆಲಸ ಇನ್ನೊಂದಿಲ್ಲ ಎಂದು ನಗರದಲ್ಲಿ ನಡೆದ ರಾಷ್ಟ್ರೀಯ ಫಿಸಿಯೋಥೆರಪಿ ಕಾರ್ಯಾಗಾರದಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಡಿಟೋರಿಯಂನಲ್ಲಿ ನಡೆದ ರಾಷ್ಟ್ರೀಯ ಫಿಸಿಯೋಥೆರಪಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎ.ಜೆ. ಆಸ್ಪತ್ರೆಯು ಒಂದು ವರ್ಷಕ್ಕೆ ನೂರರಿಂದ ಮುನ್ನೂರರಷ್ಟು ವೈದ್ಯರನ್ನು ಸಮಾಜಕ್ಕೆ ನೀಡುತ್ತಿದೆ ಎಂದಾದರೆ ಅದಕ್ಕಿಂತ ಉತ್ತಮವಾದ ಕೆಲಸ ಇನ್ನೊಂದಿಲ್ಲ ಎಂದು ಬಣ್ಣಿಸಿದರು.
ಪ್ರತಿಯೊಬ್ಬ ಭಾರತೀಯನೂ ಆರೋಗ್ಯಪೂರ್ಣವಾಗಿ ಇರುವಂತಹ ಅವಕಾಶಗಳನ್ನು ಪ್ರತಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನೀಡಬೇಕೆಂದು ಪ್ರಧಾನಿ ಮೋದಿ ಹೇಳುತ್ತಾರೆ. ಅದರ ಹಿಂದೆ ಇರುವ ಯೋಚನೆ, ದೂರಗಾಮಿ ಕಲ್ಪನೆ ಬಹಳಷ್ಟು ಅರ್ಥಪೂರ್ಣವಾಗಿದೆ. ದ.ಕ. ಜಿಲ್ಲೆ ಆರೋಗ್ಯದಲ್ಲಿ ಎಷ್ಟು ಮುಂದುವರಿದಿದೆ ಎಂದರೆ ಇಲ್ಲಿ ಒಂದು ಸಾವಿರ ಹೆರಿಗೆಯಾದರೆ ಒಂದು ಮಗು ಮೃತಪಡುತ್ತದೆ. ಅದೇ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಸಾವಿರ ಹೆರಿಗೆಯಾದರೆ ಸುಮಾರು ಇಪ್ಪತ್ತೈದರಷ್ಟು ಮಕ್ಕಳು ಮೃತಪಡುವ ಸಂಭವವಿರುತ್ತದೆ ಎಂದರು.