ಕರ್ನಾಟಕ

karnataka

ETV Bharat / state

ಅಂತಾರಾಜ್ಯ ವಂಚಕ ಸ್ಯಾಮ್​ಪೀಟರ್​ ವಿಚಾರಣೆಯಲ್ಲಿ ಬಯಲಾದವು ಹಲವು ಮಜಲುಗಳು...ಅವೇನು ಗೊತ್ತಾ? - Police department

ಸ್ಯಾಮ್‌ ಪೀಟರ್‌ ಮತ್ತು ಆತನ ಜೊತೆಗಿದ್ದ ಏಳು ಮಂದಿಯನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಒಂದು ರಿವಾಲ್ವರ್ ಹಾಗೂ 8 ಸಜೀವ ಬುಲೆಟ್ಸ್, ಒಂದು ಏರ್‌ಪಿಸ್ತೂಲ್, 10 ಮೊಬೈಲ್ ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

National cheater sam peter investigation at Mangalore

By

Published : Aug 24, 2019, 10:17 PM IST

Updated : Aug 24, 2019, 11:45 PM IST

ಮಂಗಳೂರು:ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೊ (ಎನ್‌ಸಿಐಬಿ) ಅಧಿಕಾರಿ ಸೋಗಿನಲ್ಲಿ ಬ್ಲಾಕ್‌ಮೇಲ್, ಹಣಸುಲಿಗೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಆರೋಪಿ ಸ್ಯಾಮ್​ಪೀಟರ್​ ವಿರುದ್ಧ ಆರು ರಾಜ್ಯಗಳಲ್ಲಿ 11 ಪ್ರಕರಣಗಳು ದಾಖಲಾಗಿರುವುದು ಸೇರಿದಂತೆ ಹಲವು ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಅಲ್ಲದೆ, ಆತನ ವಿಚಾರಣೆಗಾಗಿ ಸಿಬಿಐ ತಂಡವು ಬಂದಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಪಿ.ಎಸ್.ಹರ್ಷ ಅವರು, ಆರೋಪಿ ಟಿ.ಸ್ಯಾಮ್​ಪೀಟರ್ ವಿರುದ್ಧ ಸಿಬಿಐ ಪ್ರಕರಣಗಳಿವೆ. ಆದ್ದರಿಂದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇಂಟರ್​​ಪೋಲ್​ನಿಂದ ರೆಡ್​ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು. ಈತನ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ತಂಡ ಮಂಗಳೂರಿಗೆ ಬಂದಿದೆ. ಸಿಬಿಐ ಸೇರಿದಂತೆ ವಿವಿಧ ತನಿಖಾ ತಂಡಗಳು ಈತನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ ಎಂದು ತಿಳಿಸಿದರು.

ಕೇರಳ ಮೂಲದ ಸ್ಯಾಮ್​​ಪೀಟರ್ ವಿರುದ್ಧ ಕರ್ನಾಟಕ, ಉತ್ತರಪ್ರದೇಶ, ಛತೀಸ್​ಗಡ್​ ಸೇರಿದಂತೆ 6 ರಾಜ್ಯಗಳಲ್ಲಿ 14 ಪ್ರಮುಖ ಪ್ರಕರಣಗಳು ದಾಖಲಾಗಿದೆ. ಆರೋಪಿ ಮುಖಚಹರೆ, ಆಯಾ ಪ್ರದೇಶಕ್ಕೆ ತಕ್ಕಂತೆ ಭಾಷೆ ಬದಲಿಸುವುದರಲ್ಲಿ ಪರಿಣಿತನಾಗಿದ್ದ.

ನಗರ ಪೊಲೀಸ್ ಕಮಿಷನರ್ ಪಿ.ಎಸ್.ಹರ್ಷ

ಸೆಟ್ಲ್​ಮೆಂಟ್​ಗೆ ಬಂದಿದ್ದ:

ಸ್ಯಾಮ್​​ಪೀಟರ್​ ಎರಡು ಪ್ರಕರಣಗಳ ಸೆಟ್ಲ್​ಮೆಂಟ್​ಗಾಗಿ ಮಂಗಳೂರಿಗೆ ಬಂದಿದ್ದ. ಶರೀಫ್ ಎಂಬಾತ ಅಂತಾರಾಷ್ಟ್ರೀಯ ಸ್ಮಗ್ಲರ್ ಆಗಿದ್ದು, ಈತ ದುಬೈನಿಂದ ಕಳುಹಿಸಿದ ₹ 10 ಕೋಟಿ ಬಂಗಾರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ಹಣ ಮರಳಿ ಪಡೆಯಲು ಗಿರೀಶ್ ರೈ ಮತ್ತು ಇಮ್ತಿಯಾಝ್ ಎಂಬವರಿಗೆ ಬೆಂಗಳೂರಿನ ವಕೀಲ ಮುಜಾಫರ್​​ನನ್ನು ಸಂಪರ್ಕಿಸಲು ಶರೀಪ್​ ಸೂಚಿಸುತ್ತಾನೆ. ಆದರೆ, ಅವರಿಬ್ಬರು ಅಷ್ಟೂ ಹಣ ಲಪಾಟಾಯಿಸಿ ಪರಾರಿಯಾಗುತ್ತಾರೆ. ಇದರಿಂದ ಕಂಗಲಾದ ಶರೀಫ್​ ಆ ಹಣ ವಾಪಾಸು ಪಡೆಯಲು ಒಬ್ಬರನ್ನು ಹುಡುಕುವಂತೆ ಮುಜಾಫರ್ಗೆ ತಿಳಿಸುತ್ತಾನೆ. ಆಗ ಸ್ಯಾಮ್ ಪೀಟರ್​ನನ್ನು​ ನೇಮಿಸುತ್ತಾನೆ.

ಮುಜಾಫರ್ ಮಂಗಳೂರಿನ ತನ್ನ ಸಹಾಯಕ ಲತೀಪ್ ಮೂಲಕ ಸ್ಯಾಮ್​​ಪೀಟರ್​ಗೆ ಸಹಾಯ ಮಾಡುವಂತೆ ತಿಳಿಸುತ್ತಾನೆ. ಅದರಂತೆ ಲತೀಪ್​​, ಮೊಯ್ದೀನ್ ಎಂಬಾತನ ಜೊತೆಗೂಡಿ ಸಹಾಯ ಮಾಡಿದ್ದ. ಈ ವೇಳೆ ಮಂಗಳೂರಿನ ಹೋಟೆಲ್​​ನಲ್ಲಿ ತಂಗಿದ್ದಾಗ ಲತೀಪ್ ಮತ್ತು ಮೊಯ್ದೀನ್, ಸ್ಯಾಮ್ ಮತ್ತು ಆತನ 5 ಮಂದಿ ಸಂಗಡಿಗರನ್ನು ಬಂಧಿಸಲಾಯಿತು. ಅಲ್ಲದೆ, ಮೊಯ್ದೀನ್ ಮನೆಯಲ್ಲಿ ಶೋಧ ನಡೆಸಿದಾಗ ಮಾರಾಕಾಸ್ತ್ರಗಳು ಸಿಕ್ಕಿದೆ ಎಂದು ಕಮಿಷನರ್ ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ ಮಠಾಧೀಶರಿಗೆ ಸಂಬಂಧಿಸಿರುವ ವಿವಾದಕ್ಕೆ ಸೆಟ್ಲ್​ಮೆಂಟ್​ಗಾಗಿ ಉಡುಪಿಯ ರಾಮಚಂದ್ರ ನಾಯಕ್ ಎಂಬವರು ಸ್ಯಾಮ್​ನನ್ನು ಕರೆಸಿಕೊಂಡಿದ್ದರು.

ಮಂಗಳೂರಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದ ಖದೀಮರು... ನಕಲಿ ಎನ್​ಸಿಐಬಿ ಅಧಿಕಾರಿಗಳು ಅರೆಸ್ಟ್

ಪೊಲೀಸ್ ಅಧಿಕಾರಿಗಳೊಂದಿಗೆ ಪೊಟೋ ತೆಗೆಸಿಕೊಂಡಿದ್ದ:ಐಪಿಎಸ್ ಅಧಿಕಾರಿಗಳ ಪರಿಚಯವಿದೆ ಎಂದು ಬಿಂಬಿಸಲು ಅವರೊಂದಿಗೆ ಪೊಟೋ ತೆಗೆಸಿಕೊಳ್ಳುತ್ತಿದ್ದ. ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಪೊಟೋ ತೆಗೆಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೆ, ಸ್ಥಳೀಯ ವಾಹಿನಿಯೊಂದರ ಸಂದರ್ಶನ ಮಾಡಿಸಿಟ್ಟುಕೊಂಡಿದ್ದ. ಈ ವಿಡಿಯೋ ತೋರಿಸಿ ತಾನು ಪ್ರಭಾವಿ ವ್ಯಕ್ತಿ ಎಂದು ಬಿಂಬಿಸುವುದು ಈತನ ಉದ್ದೇಶವಾಗಿತ್ತು ಎಂದು ಕಮಿಷನರ್ ಹೇಳಿದರು.

Last Updated : Aug 24, 2019, 11:45 PM IST

ABOUT THE AUTHOR

...view details