ಮಂಗಳೂರು: ಮೈಕ್ರೋ ಫೈನಾನ್ಸ್ನಿಂದ ಸಾಲ ಪಡೆದ ಕೋಟ್ಯಂತರ ಮಹಿಳೆಯರ ಸಾಲವನ್ನು ಪ್ರಧಾನಿ ಮೋದಿಯವರು ಮನ್ನಾ ಮಾಡಲಿ. ಇದು ನಿಜವಾದ ದೇಶಭಕ್ತಿ ಎಂದು ದ.ಕ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಭಟ್ ಹೇಳಿದರು.
ಪ್ರಧಾನಿ ಮೋದಿ ಬಡ ಜನರ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲಿ: ಬಿ.ಎಂ.ಭಟ್ - Micro Finance
ಈ ದೇಶದ ಬಡತನ ನಿರ್ಮೂಲನೆ ಮಾಡಲು ಮೈಕ್ರೋ ಫೈನಾನ್ಸ್ ಕಾಯ್ದೆ ಜಾರಿಗೆ ತರಲಾಯಿತು. ಬಡತನ ನಿರ್ಮೂಲನೆ ಮಾಡುವುದೇ ಇದರ ಪ್ರಥಮ ಆದ್ಯತೆಯಾಗಿದೆ. ಅಲ್ಲದೆ ಸ್ವ ಉದ್ಯೋಗ ಪ್ರೋತ್ಸಾಹಿಸಲು ಮೈಕ್ರೋ ಫೈನಾನ್ಸ್ ಬಡವರಿಗೆ ಸಾಲ ನೀಡಬೇಕು ಎಂದು ದ.ಕ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಭಟ್ ಆಗ್ರಹಿಸಿದರು.
ಋಣಮುಕ್ತ ಕಾಯ್ದೆಯಡಿ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲು ಒತ್ತಾಯಿಸಿ ನಡೆದ ಬೃಹತ್ ಹೋರಾಟದಲ್ಲಿ ಮಾತನಾಡಿದ ಅವರು, ನಿಮಗೆ ಮತ ನೀಡಿದ ಮತದಾರರ ಕಷ್ಟ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜನರಿಗೆ ಬೇಕಾದ ಎಲ್ಲವನ್ನೂ ಹೋರಾಟದ ಮೂಲಕ ಪಡೆದುಕೊಳ್ಳಬೇಕಾದರೆ ಜನಪ್ರತಿನಿಧಿಗಳು ಯಾಕೆ ಎಂದು ಪ್ರಶ್ನಿಸಿದರು.
ಈ ದೇಶದಲ್ಲಿ ದನ, ದೇವರು, ಧರ್ಮಕ್ಕೆ ಅನ್ಯಾಯ ಆದರೆ ರಕ್ಷಣೆ ಮಾಡಲು ಇದ್ದಾರೆ. ಆದರೆ ಬಡಜನರ ರಕ್ಷಣೆ ಮಾಡಲು ಯಾರೂ ಇಲ್ಲ. ಮೊದಲು ನಮ್ಮನ್ನು ರಕ್ಷಣೆ ಮಾಡಿ, ದನ, ಧರ್ಮ, ದೇವರ ರಕ್ಷಣೆಯನ್ನು ನಾವು ಮಾಡುತ್ತೇವೆ. ಮೈಕ್ರೋ ಫೈನಾನ್ಸ್ ಸಾಲದ ಸುಳಿಯಿಂದ ಬಡವರನ್ನು ರಕ್ಷಿಸಿ ಎಂದು ಬಿ.ಎಂ.ಭಟ್ ಆಗ್ರಹಿಸಿದರು.