ಪುತ್ತೂರು:150ಕ್ಕೂ ಹೆಚ್ಚು ವರ್ಷದಿಂದ ಚಿಕ್ಕಪುತ್ತೂರು ಕೃಷಿ ಪ್ರದೇಶಕ್ಕೆ ನೈಸರ್ಗಿಕ ನೀರು ಸರಬರಾಜಾಗುತ್ತಿದ್ದ ಐತಿಹಾಸಿಕ ನಂದಿಲ ರಾಜಕಾಲುವೆ ನೀರಿನ ಹರಿಯುವಿಕೆಗೆ ತಡೆಯೊಡ್ಡಿದ್ದರಿಂದ ನಾಟಿ ಮಾಡಿದ ಗದ್ದೆಗೆ ನೀರು ಸ್ಥಗಿತಗೊಂಡಿದೆ.
ಪುತ್ತೂರಿನ ಆದರ್ಶ ರೈಲು ನಿಲ್ದಾಣದಿಂದ 50 ಮೀ. ದೂರವಿರುವ ಚಿಕ್ಕಪುತ್ತೂರು ಪ್ರದೇಶ ಗ್ರೀನ್‌ರೆನ್ ವ್ಯಾಪ್ತಿಯಲ್ಲಿದ್ದು, ಕಳೆದ 150 ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ಭತ್ತ ಬೆಸಾಯ ಮಾಡಲಾಗುತ್ತಿದೆ. 25 ಎಕರೆ ವ್ಯಾಪ್ತಿಯಲ್ಲಿ ಪ್ರಸ್ತುತ 15 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಗದ್ದೆ ಇದ್ದು, ಇಲ್ಲಿಗೆ ಐತಿಹಾಸಿಕ ನಂದಿಲ ರಾಜಕಾಲುವೆಯಿಂದಲೇ ನೈಸರ್ಗಿಕ ನೀರು ಹರಿದು ಬರುತ್ತಿದೆ.
ಓದಿ: 'ರಾಬರ್ಟ್' ಚಿತ್ರ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್, ಆರೋಪಿಗಳು ವಶಕ್ಕೆ
ಆದರೆ ಈ ಪ್ರದೇಶಕ್ಕೆ ಸಂಬಂಧಪಡದ ಖಾಸಗಿ ವ್ಯಕ್ತಿಯೋರ್ವ ಸ್ಥಳೀಯಾಡಳಿತಕ್ಕೆ ಯಾವುದೇ ಸೂಚನೆ ನೀಡದೆ ಏಕಾಏಕಿ ನಂದಿಲ ರಾಜಕಾಲುವೆ ನೀರಿನ ಹರಿಯುವಿಕೆಗೆ ತ್ಯಾಜ್ಯ ಮಣ್ಣುಹಾಕಿ ತಡೆಯೊಡ್ಡಿದ್ದರಿಂದ 150 ವರ್ಷಕ್ಕೂ ಅಧಿಕ ವರ್ಷದ ಚಿಕ್ಕಪುತ್ತೂರು ಭತ್ತ ಬೇಸಾಯಕ್ಕೆ ತೊಂದರೆಯಾಗಿದೆ.
ಪುತ್ತೂರು ನಗರಸಭೆಯ ಕೇಂದ್ರ ಭಾಗದಲ್ಲೇ ಇರುವ ಚಿಕ್ಕಪುತ್ತೂರು ಗದ್ದೆ ಬೇಸಯಕ್ಕೆ ತನ್ನದೇ ಇತಿಹಾಸ ಹೊಂದಿದೆ. ಶತಮಾನಗಳ ಹಿಂದೆ ಚಿಕ್ಕಪುತ್ತೂರು ಪ್ರದೇಶದ ಗದ್ದೆಗಳಿಂದ ಉತ್ತಮ ದರ್ಜೆಯ ಭತ್ತ ಬೆಳೆಯಲಾಗುತ್ತಿತ್ತು. ಅಲ್ಪಮಟ್ಟಿನ ನಗರೀಕರಣದ ಪ್ರಭಾವದಿಂದ ಪ್ರಸ್ಥುತ ಸ್ಥಳೀಯರು 15 ಎಕರೆ ಪ್ರದೇಶದಲ್ಲಿ ನಾಟಿ ಮಾಡಿ ಬೇಸಾಯ ನಡೆಸುತ್ತಿದ್ದಾರೆ. ಚಿಕ್ಕಪುತ್ತೂರು ಪ್ರದೇಶದಲ್ಲಿ ಹಿಂದಿನಿಂದಲೂ ಗದ್ದೆ ಬೇಸಯ ನಡೆಸುವುದರಿಂದ ಈ ಪ್ರದೇಶ ಚಿಕ್ಕಪುತ್ತೂರು ಗ್ರೀನ್‌ರೆನ್ ವ್ಯಾಪ್ತಿಯಲ್ಲಿದೆ.
ಚಿಕ್ಕಪುತ್ತೂರು ವ್ಯಾಪ್ತಿಯಲ್ಲಿ ಈ ನೀರು ವಿಶಾಲ ಕೃಷಿ ಭೂಮಿ ಮೂಲಕ ಹರಿಯುವುದರಿಂದ ವಾಸನೆ, ಸೊಳ್ಳೆ ಕಾಟವಿದೆ ಎಂದು ಸ್ಥಳೀಯ ನಿವಾಸಿ ಈ ಕಾಲುವೆ ನೀರಿನ ಹರಿಯುವಿಕೆಗೆ ತಡೆ ನೀಡಿ ಬಂದ್ ಮಾಡಿದ್ದಾರೆ ಎಂದು ಚಿಕ್ಕಪುತ್ತೂರಿನ ಕೃಷಿಕರು ನಗರ ಠಾಣೆಗೆ ದೂರು ನೀಡಿದ್ದಾರೆ.
ನಂದಿಲ ರಾಜಕಾಲುವೆ ನೀರಿಗೆ ತಡೆಯೊಡ್ಡಿದ್ದರಿಂದ ಕಳೆದ 2 ದಿನಗಳಿಂದ ಚಿಕ್ಕಪುತ್ತೂರು ವ್ಯಾಪ್ತಿಯಲ್ಲಿ 15 ಎಕರೆ ನಾಟಿ ಮಾಡಿದ ಗದ್ದೆಗಳು ಒಣಗಿ ಹೋಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಕೃಷಿಕರ ಆರೋಪ.