ಮಂಗಳೂರು: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಪಸರಿಸಲು ಅಹಮದಾಬಾದ್ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆಪಾದಿಸಿದ್ದಾರೆ.
ಕೊರೊನಾ ವ್ಯಾಪಕವಾಗಲು 'ನಮಸ್ತೆ ಟ್ರಂಪ್' ಕಾರ್ಯಕ್ರಮ ಕಾರಣ: ಪರಿಷತ್ ಸದಸ್ಯ ಹರೀಶ್ ಕುಮಾರ್ - Namaste Trump program is reason to spread Corona
ಗುಜರಾತ್ ಮತ್ತು ಅದರ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೊರೊನಾ ವ್ಯಾಪಕವಾಗಿ ಹರಡಲು ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಕೊರೊನಾ ವ್ಯಾಪಕವಾಗಲು ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ: ಎಂಎಲ್ಸಿ ಹರೀಶ್ ಕುಮಾರ್
ಅಹಮದಾಬಾದ್ ನಗರದಲ್ಲಿ ಡೆತ್ ರೇಟ್ ಬೇರೆ ಕಡೆಗಿಂತ ಹೆಚ್ಚಿದೆ. ಇದಕ್ಕೆಲ್ಲಾ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ. ಆದರೆ ಇದನ್ನು ಮುಚ್ಚಿಟ್ಟು ಕೇವಲ ತಬ್ಲಿಘಿ, ನಿಜಾಮುದ್ದೀನ್ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಡಬ್ಲ್ಯೂಹೆಚ್ಓ ತಿಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.