ಕರ್ನಾಟಕ

karnataka

ETV Bharat / state

ಈಶ್ವರಪ್ಪ ನನಗೂ ಪತ್ರ ಬರೆದಿದ್ದಾರೆ, ಸುಖಾಂತ್ಯವಾಗಲಿದೆ: ನಳಿನ್ ಕುಮಾರ್ ಕಟೀಲ್ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ಈಶ್ವರಪ್ಪ ಎಲ್ಲ ನಾಯಕರಿಗೂ ಪತ್ರ ಬರೆದಂತೆ ನನಗೂ ಪತ್ರ ಬರೆದಿದ್ದಾರೆ. ‌ಪಕ್ಷದ ಮೇಲಿನ ನಂಬಿಕೆಯಿಂದ ಈ ಪತ್ರವನ್ನು ಕೊಟ್ಟಿದ್ದಾರೆ‌. ಇದು ಸುಖಾಂತ್ಯವಾಗಿ ಕೊನೆಗೊಳ್ಳುತ್ತದೆ. ಯತ್ನಾಳ್ ಮತ್ತು ಈಶ್ವರಪ್ಪ ಪ್ರಕರಣ ವಿಭಿನ್ನ .ಈಶ್ವರಪ್ಪ ತಮ್ಮ ಅನುದಾನದ ಬಗ್ಗೆ ಮಾತನಾಡಿದ್ದಾರೆ. ಆದರೆ ಶಾಸಕ ಯತ್ನಾಳ್ ಅವರಿಗೆ ಪಕ್ಷದ ನೆಲೆಯಲ್ಲಿ ನೋಟಿಸ್ ಕೊಡಲಾಗಿದೆ. ಎಲ್ಲವೂ ಶೀಘ್ರದಲ್ಲಿ ಪರಿಹಾರವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

Nalinkumar kateel on Eshwarappa letter
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

By

Published : Apr 2, 2021, 2:14 PM IST

Updated : Apr 2, 2021, 2:51 PM IST

ಮಂಗಳೂರು: ಸಚಿವ ಈಶ್ವರಪ್ಪ ಅವರು ಅನುದಾನಕ್ಕೆ ಸಂಬಂಧಪಟ್ಟಂತೆ ನನಗೂ ಪತ್ರ ಬರೆದಿದ್ದಾರೆ. ಈ ಘಟನೆ ಸುಖಾಂತ್ಯವಾಗಿ ಕೊನೆಗೊಳ್ಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಶ್ವರಪ್ಪ ಹಿರಿಯ ನಾಯಕರು. ಕುಳಿತುಕೊಂಡು ಚರ್ಚೆ ಮಾಡಬಹುದಿತ್ತು. ಆದರೆ, ಅವರು ಪತ್ರ ಕೊಟ್ಟಿದ್ದಾರೆ. ಈ ಬಗ್ಗೆ ಈಶ್ವರಪ್ಪ ಅವರಲ್ಲಿ ಮಾತನಾಡಿದ್ದೇನೆ. ಯಾವ ಸಮಸ್ಯೆಯೂ ಆಗದಂತೆ ಚರ್ಚೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಈಶ್ವರಪ್ಪ ಎಲ್ಲ ನಾಯಕರಿಗೂ ಪತ್ರ ಬರೆದಂತೆ ನನಗೂ ಪತ್ರ ಬರೆದಿದ್ದಾರೆ. ‌ಪಕ್ಷದ ಮೇಲಿನ ನಂಬಿಕೆಯಿಂದ ಈ ಪತ್ರವನ್ನು ಕೊಟ್ಟಿದ್ದಾರೆ‌. ಇದು ಸುಖಾಂತ್ಯವಾಗಿ ಕೊನೆಗೊಳ್ಳುತ್ತದೆ. ಯತ್ನಾಳ್ ಮತ್ತು ಈಶ್ವರಪ್ಪ ಪ್ರಕರಣ ವಿಭಿನ್ನ. ಈಶ್ವರಪ್ಪ ತಮ್ಮ ಅನುದಾನದ ಬಗ್ಗೆ ಮಾತನಾಡಿದ್ದಾರೆ. ಆದರೆ, ಶಾಸಕ ಯತ್ನಾಳ್ ಅವರಿಗೆ ಪಕ್ಷದ ನೆಲೆಯಲ್ಲಿ ನೋಟಿಸ್ ಕೊಡಲಾಗಿದೆ. ಎಲ್ಲವೂ ಶೀಘ್ರದಲ್ಲಿ ಪರಿಹಾರವಾಗಲಿದೆ ಎಂದರು.

ಎರಡು ದಿನದಲ್ಲಿ ಶಾಸಕರ ಜೊತೆಗೆ ಚರ್ಚೆ: ಈಶ್ವರಪ್ಪ ಪತ್ರ ಬರೆದಿರುವುದು ಮತ್ತು ಶಾಸಕರುಗಳು ಸಹಿ ಸಂಗ್ರಹ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಪಕ್ಷದ ಎಲ್ಲಾ ಶಾಸಕರುಗಳು ಜೊತೆ ಮಾತುಕತೆ ನಡೆಸಿ ಪರಿಹರಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ನ ಬೆಂಕಿಯ ನಡುವೆ ನಮ್ಮದು ಹೊಗೆಯಷ್ಟೇ:ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಜೋರಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಾಯಕತ್ವಕ್ಕಾಗಿ ಬೀದಿಗಿಳಿದಿದ್ದಾರೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಟ್ವೀಟ್ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ದೊಡ್ಡದಾಗಿ ಬೆಂಕಿ ಹೊತ್ತಿಕೊಂಡಿತ್ತು. ನಮ್ಮಲ್ಲಿ ಸ್ವಲ್ಪ ಹೊಗೆ ಮಾತ್ರ ಎಂದರು. ಈಶ್ವರಪ್ಪ ಅವರ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಗಳ ಕೈಯಲ್ಲಿದ್ದ ಪತ್ರಿಕಾ ಹೇಳಿಕೆಯನ್ನು ರಾಹುಲ್ ಗಾಂಧಿಯವರು ಹರಿದು ಹಾಕಿದ ರೀತಿಯ ಅವಮಾನ ಇದಲ್ಲ ಎಂದು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಿಡಿ ಪ್ರಕರಣ ನ್ಯಾಯಾಲಯದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಉಪಚುನಾವಣೆಯಲ್ಲಿ ಪಕ್ಷ ಮೂರೂ ಕ್ಷೇತ್ರದಲ್ಲಿ ಯೂ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.

Last Updated : Apr 2, 2021, 2:51 PM IST

For All Latest Updates

ABOUT THE AUTHOR

...view details