ಕರ್ನಾಟಕ

karnataka

ETV Bharat / state

ಚೀನಾ ಸೇನೆ ಒಳ ಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ಹೋಗಿದ್ರೇ? ಕಟೀಲ್

ಚೀನಾ ಸೇನೆ ಒಳ ಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

By

Published : Jul 8, 2020, 4:12 PM IST

Nalin Kumar katil tweet
Nalin Kumar katil tweet

ಮಂಗಳೂರು:ಚೀನಾ ಸೇನೆ ಒಳ ಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರು ನಿನ್ನೆ ಟ್ವೀಟ್​​ನಲ್ಲಿ ಚೀನಾ ಸೇನೆ ಎರಡು ಕಿ.ಮೀ. ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ ಅಥವಾ ಸೇನಾ ಮುಖ್ಯಸ್ಥರೇ? ಎಂದು ಪ್ರಶ್ನಿಸಿದ್ದರು. ಸದ್ಯ ಆ ಟ್ವೀಟ್​​​ಗೆ ಕಟೀಲ್ ಈ ರೀತಿ ಉತ್ತರಿಸಿದ್ದಾರೆ.

ಚೀನಾ ಸೇನೆ ಒಳ ಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೇ? ಇಲ್ಲ. ಕೋವಿಡ್ ಬಗ್ಗೆ ಮಾತನಾಡಲು ನಾವು ವೈದ್ಯರೂ ಅಲ್ಲ. ಈ ರೀತಿಯ ತರ್ಕದಿಂದ ಏನೂ ಉಪಯೋಗವಿಲ್ಲ. ಗಡಿಯಲ್ಲಿನ ಸ್ಥಿತಿಯೇನು, ಅದರ ಪ್ರಕ್ರಿಯೆಗಳೇನು ಅರಿಯಿರಿ. ತಂತ್ರಜ್ಞಾನದ ಯುಗದಲ್ಲಿ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿ.ಎಲ್.ಸಂತೋಷ್ ಅವರು ಯಡಿಯೂರಪ್ಪ ಅವರಿಗೆ ನೀಡಿರುವ ಶಹಬ್ಬಾಸ್​​ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ ಎಂಬ ಸಿದ್ದರಾಮಯ್ಯ ಅವರ ಟ್ವೀಟ್​​​ಗೆ ಪ್ರತಿಕ್ರಿಯೆ ನೀಡಿರುವ ಕಟೀಲ್, ನೀವು ಡಿಕೆಶಿಗೆ ನೀಡುತ್ತಿರುವ ಬೆಂಬಲ ಎಂಥದ್ದು? ಕಾಂಗ್ರೆಸ್​​ನೊಳಗೆ ನೀವು ನಡೆಸಿದ ರಾಜಕೀಯವೇನು ಕಡಿಮೆಯೇ. ನಿಮ್ಮನ್ನು ಪಕ್ಷಕ್ಕೆ ಕರೆ ತರಲು ಕಾರಣೀಕರ್ತರಾದ ಹೆಚ್.ವಿಶ್ವನಾಥ ಅವರೇ ಪಕ್ಷ ತೊರೆಯುವಂತಾಯಿತಲ್ಲವೆ. ಎಲ್ಲರೂ ನಿಮ್ಮಂತೆ ಎಂದು ಭಾವಿಸಬೇಡಿ. ಬೇರೆಯವರ ಎಲೆಯಲ್ಲಿನ ನೊಣ ನೋಡುವುದು ಬಿಡಿ ಎಂದಿದ್ದಾರೆ.

ಪಿಎಂ ಕೇರ್ಸ್​ ಫಂಡ್ ಬಗ್ಗೆ ಸಿದ್ದರಾಮಯ್ಯ ಅವರ ಟ್ವೀಟ್ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾರತೀಯರಿಗೆ ನಮ್ಮ ಪ್ರಧಾನಿ ಬಗ್ಗೆ ಅಪಾರ ನಂಬಿಕೆಯಿದೆ. ಹಾಗಾಗಿಯೇ ಜನ ಅವರ ಬೆಂಬಲಕ್ಕೆ ನಿಂತಿದ್ದಾರೆ. ಪಿಎಂ ಕೇರ್ಸ್​ ಫಂಡ್ ಕುರಿತು ಸೂಕ್ತ ಸಮಯದಲ್ಲಿ ಮಾಹಿತಿ ದೊರೆಯಲಿದೆ. ದುಡ್ಡು ಹಾಕಿದವರಿಗಿಂತ ಬೇರೆಯವರಿಗೆ ಅದರ ಬಗ್ಗೆ ಹೆಚ್ಚು ಕಾಳಜಿ ಇದ್ದಂತಿದೆ ಎಂದಿದ್ದಾರೆ.

ABOUT THE AUTHOR

...view details