ಮಂಗಳೂರು:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಯುತ್ತಿರುವ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತರಕಾರಿ ಹೆಚ್ಚುತ್ತಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.
ಕಟೀಲು ಬ್ರಹ್ಮಕಲಶೋತ್ಸವ: ಮಹಾನ್ನದಾನಕ್ಕೆ ನಳಿನ್ ಕುಮಾರ್ ತರಕಾರಿ ಹೆಚ್ಚುವ ಫೋಟೋ ವೈರಲ್
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತರಕಾರಿ ಹೆಚ್ಚುತ್ತಿರುವ ಫೋಟೋ ವೈರಲ್
ನಳಿನ್ ಕುಮಾರ್ ಕಟೀಲ್
ಕಟೀಲು ಬ್ರಹ್ಮ ಕಲಶೋತ್ಸವದ ಸಮಿತಿಯ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಅವರು ಕ್ಷೇತ್ರದ ಬ್ರಹ್ಮಕಲಶೋತ್ಸವದ ಉಸ್ತುವಾರಿ ವಹಿಸಿಕೊಂಡಿದ್ದು, ಇದರ ನಡುವೆ ಮಹಾನ್ನದಾನಕ್ಕೆ ಸ್ವಯಂಸೇವಕರ ನಡುವೆ ಕುಳಿತು ತರಕಾರಿ ಹೆಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಸ್ವಯಂ ಸೇವಕರಿಗೆ ಸ್ಫೂರ್ತಿಯಾಗಿದ್ದು, ಈ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.