ಮಂಗಳೂರು: ಲೀಡ್ ಬ್ಯಾಂಕ್ಗಳು ಸಹಕಾರಿ ಬ್ಯಾಂಕುಗಳಿಗೆ ಏನು ಸಹಕಾರ ಬೇಕೋ ಅದನ್ನು ಕಾನೂನುಗಳಿದ್ದಲ್ಲಿ ಕಟ್ ಮಾಡಿ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮ ಉದ್ಘಾಟಿಸಿದ ನಳಿನ್ ಕುಮಾರ್ - Nalin Kumar kateel news
ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಲೀಡ್ ಬ್ಯಾಂಕುಗಳು ಸಹಕಾರಿ ಬ್ಯಾಂಕುಗಳಿಗೆ ಏನು ಸಹಕಾರ ಬೇಕೋ ಅದನ್ನು ಕಾನೂನುಗಳಿದ್ದಲ್ಲಿ ಕಟ್ ಮಾಡಿ ಕೊಡಬೇಕು ಎಂದಿದ್ದಾರೆ.

ನಗರದ ಕೊಡಿಯಾಲಬೈಲ್ನಲ್ಲಿರುವ ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಕೊಡುವ ಚಿಂತನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ದ.ಕ.ಜಿಲ್ಲೆಯಲ್ಲಿ 7000 ಮಂದಿಗೆ ಇದನ್ನು ಕೊಡಬೇಕೆಂದು ಟಾರ್ಗೆಟ್ ಇದೆ. ಅದನ್ನು ನಾವು ಪೂರ್ಣಗೊಳಿಸಲು ಸಹಕಾರಿ ಸಂಘದ ಕೊಡುಗೆ ಅಗತ್ಯವಿದೆ. ಲೀಡ್ ಬ್ಯಾಂಕುಗಳು ಸಹಕಾರಿ ಬ್ಯಾಂಕುಗಳಿಗೆ ಏನು ಸಹಕಾರ ಬೇಕೋ ಅದನ್ನು ಕಾನೂನುಗಳಿದ್ದಲ್ಲಿ ಕಟ್ ಮಾಡಿ ಕೊಡಬೇಕು ಎಂದು ಹೇಳಿದರು.
ನಮ್ಮ ಹಳ್ಳಿ ಹಳ್ಳಿಗಳಲ್ಲಿ ಸಾಮಾನ್ಯ ವ್ಯಕ್ತಿಯೂ ಅಂಗಡಿಗಳನ್ನು ತೆರೆಯಲು ಸಹಕಾರಿ ಸಂಘದಿಂದ ಮಾತ್ರ ಸಾಧ್ಯ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.