ಉಳ್ಳಾಲ : ಕುತ್ತಾರು ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ವೃತ್ತಿಯಲ್ಲಿ ಗಾಣವನ್ನು ಅನುಸರಿಸಿಕೊಂಡು ಬಂದ ಸಮಾಜ ಗಾಣದ ಕೊಟ್ಯದ ಮೂಲಕ ಭಗವಂತನನ್ನು ಆರಾಧನೆ ಮಾಡಿಕೊಂಡು ಬರುತ್ತಿದೆ. ವೃತ್ತಿಯ ಮೂಲಕವೇ ಭಗವಂತನನ್ನು ಕಂಡಂತ ಉತ್ತಮ ನಿದರ್ಶನ ಗಾಣದ ಕೊಟ್ಯದ್ದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಕುತ್ತಾರು ಗಾಣದ ಮನೆ ಜೀರ್ಣೋದ್ಧಾರ ಸಮಿತಿ ಇದರ ಆಶ್ರಯದಲ್ಲಿ ಕುತ್ತಾರು ತೇವುಲದಲ್ಲಿ ನೂತನವಾಗಿ ನಿರ್ಮಾಣಗೊಂಡ ಗಾಣಕೊಟ್ಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಪ್ರದಾಯದ ಪ್ರಕಾರ ದೈವಾರಾಧನೆ, ದೇವತಾರಾಧನೆಗೆ ಪರಿಶುದ್ಧ ತೈಲವನ್ನು ಅರ್ಪಣೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದರು.