ಕರ್ನಾಟಕ

karnataka

ETV Bharat / state

ಮಂಗಳೂರು: ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನ ಪಡೆದ ನಳಿನ್ ಕುಮಾರ್, ಜನಾರ್ದನ ಪೂಜಾರಿ - ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನ ಪಡೆದ ಜನಾರ್ದನ ಪೂಜಾರಿ

ಬೆಳಗ್ಗೆ 9.30ಯಿಂದ ಮಧ್ಯಾಹ್ನ 12 ರವರೆಗೆ ಆಸ್ಕರ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ‌ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. 12ರಂದು ಚರ್ಚ್​​​​​​ನಲ್ಲಿ ಆರು ಧರ್ಮಪ್ರಾಂತ್ಯದ ಧರ್ಮಗುರುಗಳಿಂದ ಧಾರ್ಮಿಕ ವಿಧಿವಿಧಾನಗಳು ಸಹಿತ ಪ್ರಾರ್ಥನೆ ನೆರವೇರಿತು.

ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನ ಪಡೆದ ನಳಿನ್ ಕುಮಾರ್, ಜನಾರ್ದನ ಪೂಜಾರಿ
ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನ ಪಡೆದ ನಳಿನ್ ಕುಮಾರ್, ಜನಾರ್ದನ ಪೂಜಾರಿ

By

Published : Sep 15, 2021, 12:44 PM IST

Updated : Sep 15, 2021, 1:49 PM IST

ಮಂಗಳೂರು: ಇಹಲೋಕ ತ್ಯಜಿಸಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಇಂದು ನಗರದ ಮಿಲಾಗ್ರಿಸ್ ಇರಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಸೇರಿದಂತೆ ಹಲವಾರು ಮುಖಂಡರು ಅಂತಿಮ ದರ್ಶನ ಪಡೆದರು. ಈ ಸಂದರ್ಭ ಜನಾರ್ದನ ಪೂಜಾರಿಯವರು ಗದ್ಗದಿತರಾಗಿ, ಗಳಗಳನೆ ಅತ್ತರು.

ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನ ಪಡೆದ ನಳಿನ್ ಕುಮಾರ್, ಜನಾರ್ದನ ಪೂಜಾರಿ

ಬೆಳಗ್ಗೆ 9.30ಯಿಂದ ಮಧ್ಯಾಹ್ನ 12 ರವರೆಗೆ ಆಸ್ಕರ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ‌ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. 12ರಂದು ಚರ್ಚ್​​​​​ನಲ್ಲಿ ಆರು ಧರ್ಮಪ್ರಾಂತ್ಯದ ಧರ್ಮಗುರುಗಳಿಂದ ಧಾರ್ಮಿಕ ವಿಧಿವಿಧಾನಗಳು ಸಹಿತ ಪ್ರಾರ್ಥನೆ ನೆರವೇರಿತು.

ಸರ್​​...ಸರ್​​ ಅಂತಾ ಬರ್ತಿದ್ದರು...

ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನ ಪಡೆದ ನಳಿನ್ ಕುಮಾರ್, ಜನಾರ್ದನ ಪೂಜಾರಿ

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಅಗಲಿದ್ದಾರೆ ಎಂಬ ಸಂಗತಿ ಕೇಳಿ ಬಹಳ ಬೇಸರವಾಯಿತು. ಅವರನ್ನು ಉಳಿಸಿಕೊಳ್ಳಲಾಗದಿರೋದು ನಮ್ಮ ದೌರ್ಭಾಗ್ಯ. ನನ್ನನ್ನು ಎಲ್ಲಿ ಕಂಡರೂ ಸರ್.. ಸರ್.. ಎಂದು ನನ್ನ ಹಿಂದೆಯೇ ಬರುತ್ತಿದ್ದರು. ಹೋದರು ಇನ್ನು ಆಸ್ಕರ್ ರನ್ನು ನೋಡಲಾಗುವುದಿಲ್ಲ. ನನ್ನ ಅರ್ಧ ಜೀವ ಹೋದಂತೆಯೇ ಎಂದು ಗಳಗಳನೇ ಅತ್ತು ಬಿಟ್ಟರು.

ಸರಳ ಸಜ್ಜನಿಕೆ ರಾಜಕಾರಣಿ: ಕಟೀಲ್​

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಅವರು ದ.ಕ.ಜಿಲ್ಲೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಮೆರೆದವರು‌.‌ ಸಾಮಾನ್ಯ ಕಾರ್ಯಕರ್ತನಾಗಿ ಬಂದು ಕಾಂಗ್ರೆಸ್ ನ ಹಿರಿಯ ಮುತ್ಸದ್ದಿಯಾಗಿ ಆದರ್ಶ ಹಾಗೂ ಸರಳ ಸಜ್ಜನಿಕೆಗೆ ಹೆಸರಾಗಿದ್ದವರು‌. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೇಶದ ಸಮಸ್ಯೆಗಳ ಬಗ್ಗೆ ಗಮನ ಸೆಳೆದವರು‌. ಎಲ್ಲರಿಗೆ ಆದರ್ಶ ಪ್ರಾಯವಾದವರು, ಇಂದಿನ ಕಾಲಘಟ್ಟದಲ್ಲಿ ಸರಳತೆ ಮತ್ತು ಸಜ್ಜನಿಕೆ ಹೇಗಿರಬೇಕು ಎಂಬುದಕ್ಕೆ ಆಸ್ಕರ್ ನಿದರ್ಶನವಾಗಿದ್ದರು‌.

ಸುದೀರ್ಘವಧಿಯಲ್ಲಿ ರಾಜಕಾರಣ ಮಾಡಿರುವ ಅವರು ನಮ್ಮಂತಹ ಕಿರಿಯರು ಸಿಕ್ಕಾಗ ಪ್ರೀತಿಯಿಂದ ಮಾರ್ಗದರ್ಶನ ಮಾಡುತ್ತಿದ್ದರು. ದೆಹಲಿಯಲ್ಲಿ ದ.ಕ.ಜಿಲ್ಲೆಯವರು ಸಿಕ್ಕಾಗ ಸಂತೋಷ ಪಡುತ್ತಿದ್ದರು. ಅವರು ಅಜಾತಶತ್ರುವಾಗಿ ಇದ್ದವರು. ಉಡುಪಿ, ದ.‌ಕ.ಜಿಲ್ಲೆಗೆ ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ.

ಕೇಂದ್ರದ ಸಾರಿಗೆ ಸಚಿವರಾಗಿದ್ದಾಗ ರಾಜ್ಯದ ಅನೇಕ ರಸ್ತೆಗಳನ್ನು ಮಾಡಲು ಒತ್ತು ಕೊಟ್ಟಿದ್ದರು. ರಾಜ್ಯದ ಕೊಂಡಿಯಾಗಿ ಕೇಂದ್ರದಲ್ಲಿದ್ದರು. ಎಲ್ಲ ಧರ್ಮದವರನ್ನು‌ ಪ್ರೀತಿಸುತ್ತಿದ್ದರು. ಶ್ರೇಷ್ಠ ಯೋಗಪಟು, ಸಂಗೀತದಲ್ಲೂ ಅವರಿಗೆ ಆಸಕ್ತಿಯಿತ್ತು. ಓರ್ವ ಶ್ರೇಷ್ಠ ಸಾಧಕನನ್ನು ನಾವು ಕಳೆದುಕೊಂಡಿದ್ದೇವೆ. ಇದರಿಂದ ಅತೀವ ದುಃಖವಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್​ ಹೇಳಿದರು.

Last Updated : Sep 15, 2021, 1:49 PM IST

For All Latest Updates

ABOUT THE AUTHOR

...view details