ಬಂಟ್ವಾಳ :ಹಲವು ಸಮಯದಿಂದ ಬಿ ಸಿ ರೋಡಿನ ತಂಗುದಾಣದಲ್ಲಿ ಬೀಡು ಬಿಟ್ಟಿದ್ದ ಮೈಸೂರು ಮೂಲದ ವೃದ್ಧ ದಂಪತಿ ಕೊನೆಗೂ ಊರಿಗೆ ತೆರಳಿದ್ದಾರೆ. ಬಂಟ್ವಾಳ ಹ್ಯುಮಾನಿಟಿ ಕ್ಲಬ್ ಸಂಘಟಕ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜ ಚಂಡ್ತಿಮಾರ್ ಈ ವೃದ್ಧ ದಂಪತಿ ಮನವೊಲಿಸಿ ಬಂಟ್ವಾಳನಗರ ಪೊಲೀಸರ ಸಹಕಾರದಿಂದ ಸರ್ಕಾರಿ ಬಸ್ನಲ್ಲಿ ಊರಿಗೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ದಂಪತಿ ಹಿಸ್ಟರಿ :ಸುಮಾರು 5 ವರ್ಷಗಳ ಹಿಂದೆ ಈ ವೃದ್ಧ ದಂಪತಿ ನಾಗರಾಜ ಮತ್ತು ಶಾಂತಮ್ಮ ಫರಂಗಿಪೇಟೆಗೆ ಬಂದು ಇಲ್ಲಿ ಹೋಟೆಲ್ವೊಂದರಲ್ಲಿ ಕೆಲಸಕ್ಕಿದ್ದರು. ಸ್ವಲ್ಪ ಸಮಯದ ಬಳಿಕ ಕೆಲಸ ಬಿಟ್ಟು ಬಿಸಿರೋಡಿಗೆ ಬಂದು ಭಿಕ್ಷೆ ಬೇಡುತ್ತಾ ಬಸ್ ತಂಗುದಾಣದಲ್ಲಿ ಬೀಡು ಬಿಟ್ಟಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಬಂಟ್ವಾಳ ಪುರಸಭೆ ಇವರನ್ನು ವಾಮಂಜೂರಿನ ವೃದ್ದಾಶ್ರಮಕ್ಕೆ ಸೇರಿಸಿತ್ತು. ಅಲ್ಲಿ ಜಗಳವಾಡಿ ವಾಪಸ್ ಬಂದು ಅದೇ ತಂಗುದಾಣದಲ್ಲಿ ಮತ್ತೆ ಬೀಡು ಬಿಟ್ಟಟ್ಟಿದ್ದರು. ಮತ್ತೆ ಸಾರ್ವಜನಿಕರ ದೂರಿನನ್ವಯ ಇವರಿಗೆ ಪುರಸಭೆ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ವಾಜಪೇಯಿ ವಾಣಿಜ್ಯ ಸಂಕೀರ್ಣದ ಖಾಲಿ ಕೊಠಡಿಯೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.