ಮೂಲ್ಕಿ(ದಕ್ಷಿಣ ಕನ್ನಡ): ಮಂಗಳೂರು-ಮೂಲ್ಕಿ ಹೆದ್ದಾರಿಯಲ್ಲಿನ ಹೆಚ್ಡಿಎಫ್ಸಿ ಬ್ಯಾಂಕ್ ಮುಂಭಾಗದಲ್ಲಿ ಹಾಡಹಗಲೇ ಉದ್ಯಮಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೂಲ್ಕಿ: ಹಾಡಹಗಲೇ ದುಷ್ಕರ್ಮಿಗಳಿಂದ ಯುವ ಉದ್ಯಮಿಯ ಬರ್ಬರ ಹತ್ಯೆ! - ಮೂಡಬಿದ್ರೆಯಲ್ಲಿ ಉದ್ಯಮಿ ಹತ್ಯೆ
ತಲ್ವಾರ್ ಹಾಗೂ ಮಾರಾಕಾಸ್ತ್ರಗಳಿಂದ ಕೊಚ್ಚಿ ಉದ್ಯಮಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಯುವ ಉದ್ಯಮಿ
ಮೂಡಬಿದ್ರೆಯಲ್ಲಿ ಉದ್ಯಮಿಯಾಗಿರುವ ಅಬ್ದುಲ್ ಲತೀಫ್(38) ಹತ್ಯೆಯಾದ ಉದ್ಯಮಿ. ತಲ್ವಾರ್ ಹಾಗೂ ಮಾರಾಕಾಸ್ತ್ರಗಳಿಂದ ಕೊಚ್ಚಿ ಉದ್ಯಮಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ ಮತ್ತು ಬೈಕ್ನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲೇ ಈ ಭೀಭತ್ಸ ಕೃತ್ಯ ನಡೆದಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ವೈಯಕ್ತಿಕ ದ್ವೇಷದಿಂದ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.