ಕರ್ನಾಟಕ

karnataka

ETV Bharat / state

ಅಡ್ಯಾರ್ ಗ್ರಾ.ಪಂ ಸದಸ್ಯನ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ...! - Mangalore

ಅಡ್ಯಾರ್ ಗ್ರಾ.ಪಂ ಸದಸ್ಯ ಯಾಕೂಬ್ ಎಂಬುವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Mangalore
ಮಂಗಳೂರು

By

Published : Jul 27, 2020, 11:25 PM IST

ಮಂಗಳೂರು: ಅಡ್ಯಾರ್ ಗ್ರಾಪಂ ಸದಸ್ಯ ಯಾಕೂಬ್ ಎಂಬುವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಮೂಲಕ ನಾಲ್ಕನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರಿಪಳ್ಳ ಮಿತ್ತಬೆಟ್ಟು ನಿವಾಸಿ ಉಮರ್ ಫಾರೂಕ್ (35) ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣದಲ್ಲಿ ಮುಹಮ್ಮದ್ ಶಾಕಿರ್, ಹನೀಫ್, ಅಹ್ಮದ್ ಶಾಕೀರ್ ಎಂಬವರನ್ನು ಜು.14ರಂದು ಬಂಧಿಸಲಾಗಿತ್ತು.

ಪ್ರಕರಣದ ವಿವರ:

ಅಡ್ಯಾರ್ ಗ್ರಾ.ಪಂ ಸದಸ್ಯ ಯಾಕೂಬ್ ಮತ್ತು ಶಾಕೀರ್‌ ಎಂಬಾತನಿಗೆ ವೈಯಕ್ತಿಕವಾಗಿ ಮನಸ್ತಾಪವಿತ್ತು. ಇದೇ ವಿಚಾರದಲ್ಲಿ ಜು.10 ರಂದು ಸಂಜೆ ಅಡ್ಯಾರ್‌ ಪದವು ಎಂಬಲ್ಲಿ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡ ಶಾಕೀರ್ ಮತ್ತು ಆತನ ಸಹಚರರು ಯಾಕೂಬ್‌ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂದರ್ಭ ಯಾಕೂಬ್ ಅಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಇನ್ನು ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಫಾರೂಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ABOUT THE AUTHOR

...view details