ಮಂಗಳೂರು:ಕಲ್ಲು ಕ್ವಾರಿಯೊಂದರ ಮಾಲೀಕ ಹಾಗೂ ಆತನ ವಾಹನ ಚಾಲಕನ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕಲ್ಲು ಕ್ವಾರಿ ಮಾಲೀಕನ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ - ಕಲ್ಲು ಕ್ವಾರಿ ಮಾಲೀಕ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲು ಕ್ವಾರಿಯೊಂದರ ಮಾಲೀಕ ಹಾಗೂ ಆತನ ವಾಹನ ಚಾಲಕನ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ವಿಘ್ನೇಶ್ ಶೆಟ್ಟಿ ಹಾಗೂ ಲೋಕೇಶ್ ಬಂಗೇರ ಶಿಕ್ಷೆಗೊಳಗಾದವರು. ಇವರು 2003ರಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲ್ಲು ಕ್ವಾರಿ ಮಾಲೀಕ ವೇಣುಗೋಪಾಲ ನಾಯ್ಕ್ ಮತ್ತು ಆತನ ವಾಹನ ಚಾಲಕನ ಕೊಲೆ ಮಾಡಿದ್ದರು. ಅಂದಿನ ಪಣಂಬೂರು ಹೈವೇ ಸ್ಕ್ವಾಡ್ ಡಿವೈಎಸ್ಪಿ ಕೆ.ಎನ್. ಯೋಗಪ್ಪ ಮತ್ತು ತಂಡ ಭೇದಿಸಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅಂದಿನ ಠಾಣಾ ಇನ್ಸ್ಪೆಕ್ಟರ್ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 6ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಐಪಿಸಿ ಸೆಕ್ಷನ್ 143, 147, 148, 341, 109, 120(b), 302 ಹಾಗೂ 149ರ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಸೈದುನ್ನೀಸಾ ಅವರು ಇಬ್ಬರೂ ಆರೋಪಿಗಳು ದೋಷಿಗಳು ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.