ಸಸಿಹಿತ್ಲು (ಮಂಗಳೂರು) : ಯುವಕನಿಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿರುವ ಘಟನೆ ಉತ್ತನ ಬಳಗ ಶಿಶುಮಂದಿರ ರಸ್ತೆ ಬಳಿ ನಡೆದಿದೆ.
ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನ - ಕೊಲೆಗೆ ಯತ್ನ
ಹಳೆ ವೈಷಮ್ಯ ಹಿನ್ನೆಲೆ ಯುವಕನಿಗೆ ಚೂರಿ ಇರಿಯಲಾಗಿದೆ. ಇದೇ ವೇಳೆ ಈತನನ್ನು ಕಾಪಾಡಲು ಹೋದ ಇನ್ನಿಬ್ಬರ ಮೇಲೂ ಹಲ್ಲೆ ನಡೆಸಲಾಗಿದೆ.
ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನ
ಸ್ಥಳೀಯ ನಿವಾಸಿಗಳಾದ ಸೌರಭ್, ಜಸ್ಟೀನ್, ಸುಜಿತ್ ಎಂಬುವರು ಶನಿವಾರ ರಾತ್ರಿ ಪಡೆದುಕೊಂಡು ಹೋಗುವಾಗ ಆರೋಪಿ ಪ್ರಶಾಂತ್ ಎಂಬಾತನು ಜಿತೇಶ್ಗೆ ಚೂರಿಯಿಂದ ಇರಿದಿದ್ದಾನೆ. ಇದನ್ನು ತಡೆಯಲು ಹೋದ ಸೌರಭ್ ಹಾಗೂ ಜಸ್ಟೀನ್ ಅವರ ಮೇಲೂ ಹಲ್ಲೆ ಮಾಡಿದ್ದಾನೆ.
ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪ್ರಶಾಂತ್ಗೆ ಜಿತೇಶ್ ಮೇಲೆ ಹಳೆ ವೈಷಮ್ಯವಿತ್ತು ಎನ್ನಲಾಗಿದೆ. ಘಟನೆ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.