ಮಂಗಳೂರು:ಕದ್ದ ಮೊಬೈಲ್ ಅನ್ನು ವಾಪಸ್ ನೀಡಲು 500 ರೂಪಾಯಿ ಬೇಡಿಕೆಯನ್ನಿಡುತ್ತಿದ್ದಾನೆಂಬ ಕಾರಣಕ್ಕೆ ಕೊಲೆ ಮಾಡಿ ಪರಾರಿಯಾದ ಆರೋಪಿಯನ್ನು ಮಂಗಳೂರಿನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಬಂದರು ರೈಲ್ವೆ ಗೂಡ್ಸ್ ಶೆಡ್ ಯಾರ್ಡ್‌ನಲ್ಲಿ 2021 ಫೆ.18ರಂದು ಅಸ್ಸೋಂನ ಮೈನುಲ್ ಹಕ್ ಬಾರ್ಬುಯ್ಯಾ ಎಂಬಾತನನ್ನು ಕೊಲೆ ನಡೆದಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ರೈಲ್ವೆ ಪೊಲೀಸರು ಒಡಿಶಾ ಮೂಲದ ಪ್ರದೀಪ್ ಲಕಾರ ಎಂಬಾತನನ್ನು ಬಂಧಿಸಿದ್ದಾರೆ.
ಕೊಲೆಯಾದ ಮೈನುಲ್ ಹಕ್ ಸುಮಾರು ಹತ್ತು ವರ್ಷಗಳಿಂದ ಮಂಗಳೂರು ಬಂದರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಈತ ಕುಡಿತದ ಚಟ ಹೊಂದಿದ್ದ ಗೆಳೆಯರೊಂದಿಗೆ ಸೇರಿ ಜಗಳ ಮಾಡುತ್ತಿದ್ದ. ಆಗಸ್ಟ್‌ನಲ್ಲಿ ಆರೋಪಿ ಪ್ರದೀಪ್ ಲಕಾರ ಮದ್ಯ ಸೇವನೆ ಮಾಡಿ ಮಲಗಿದ್ದಾಗ ಆತನ ಮೊಬೈಲ್ ಫೋನ್ ಅನ್ನು ಮೈನುಲ್ ಹಕ್ ಕದ್ದಿದ್ದ.