ಕರ್ನಾಟಕ

karnataka

ETV Bharat / state

ರಸ್ತೆ ಕಾಮಗಾರಿಗೆ 19 ಕೋಟಿ ರೂ. ಅನುದಾನ ಮಂಜೂರು: ಶಾಸಕ ಉಮಾನಾಥ ಕೋಟ್ಯಾನ್

ತೆಂಕಮಿಜಾರು ಹಾಗೂ ಇರುವೈಲು ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಒಟ್ಟು 2.55 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.

Umananth kotyan
Umananth kotyan

By

Published : Aug 18, 2020, 1:16 PM IST

ಮಂಗಳೂರು: ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ 19 ಕೋಟಿ ರೂ. ಅನುದಾನ ಹೊಸದಾಗಿ ಮಂಜೂರಾಗಿದ್ದು, ಅದರಲ್ಲಿ 17 ಕೋಟಿ ರೂ.ಗಳನ್ನ ಗ್ರಾಮೀಣ ಪ್ರದೇಶಗಳಿಗೆ ಹಾಗೂ 2 ಕೋಟಿ ರೂ.ಗಳನ್ನ ನಗರಕ್ಕೆ ಮೀಸಲಿರಿಸಿದ್ದೇವೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ತೆಂಕಮಿಜಾರು ಹಾಗೂ ಇರುವೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಲ್ಕು ಕಡೆ ಒಟ್ಟು 2.55 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮುಲ್ಕಿ - ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳಿರಬೇಕು ಎನ್ನುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಕಾಂಕ್ರೀಟ್​ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈಗಾಗಲೇ 217 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಾಗಿವೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ಹಕ್ಕುಪತ್ರ ವಿತರಣೆ ನೀಡುವಲ್ಲಿ ಹೆಚ್ಚಿನ ಶ್ರಮ ಹಾಕಿದ್ದೇವೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ 8 ಸಾವಿರಕ್ಕೂ ಅಧಿಕ ಹಕ್ಕುಪತ್ರಗಳನ್ನು ಜನರಿಗೆ ವಿತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಣೆಯಲ್ಲಿ ಮೂಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರ ನಂ.1 ಸ್ಥಾನದಲ್ಲಿದೆ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.

ಈ ಸಂದರ್ಭ 75 ಲಕ್ಷ ರೂ. ವೆಚ್ಚದಲ್ಲಿ ತೆಂಕಮಿಜಾರು ಗ್ರಾಮದ ಪಡೀಲು ಮಿಜಾರು ಗರೋಡಿ ರಸ್ತೆ ಅಭಿವೃದ್ಧಿ, 95 ಲಕ್ಷ ರೂ. ವೆಚ್ಚದಲ್ಲಿ ಇರುವೈಲು ಗ್ರಾಪಂ ವ್ಯಾಪ್ತಿಯ ತೋಡಾರು ಗ್ರಾಮದ ಬಾವುದ ಬೆಟ್ಟುವಿನಿಂದ ಪಡುಬೆಟ್ಟುವರೆಗೆ ರಸ್ತೆ ಅಭಿವೃದ್ಧಿ, 50 ಲಕ್ಷ ರೂ‌. ವೆಚ್ಚದಲ್ಲಿ ತೋಡಾರು ಗ್ರಾಮದ ಪಡೀಲು ಬಾಕ್ಯಾರಿನಿಂದ ಪಡುಪೇರಳಬೆಟ್ಟು ರಸ್ತೆ ಅಭಿವೃದ್ಧಿ ಹಾಗೂ 35 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ಅಳವಡಿಸಲಾಗುವ ತೋಡಾರು ಗ್ರಾಮದ ತೋಡಾರುಗುತು ರಸ್ತೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ತೆಂಕಮಿಜಾರು ಗ್ರಾಪಂ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಾಜಿ ಸದಸ್ಯ ಕರುಣಾಕರ ಶೆಟ್ಟಿ, ಇರುವೈಲು ಗ್ರಾಪಂ ಮಾಜಿ ಸದಸ್ಯ ರಜಾಕ್, ಪ್ರವೀಣ್, ಜಯಶಂಕರ್, ಪ್ರಮೀಳಾ, ಪ್ರದೀಪ್, ಬಿಜೆಪಿ ಮೂಡುಬಿದಿರೆ ಮೂಲ್ಕಿ ಮಂಡಲ ಉಪಾಧ್ಯಕ್ಷ ಅಜಯ್ ರೈ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details