ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) 2020-21ರ ಎರಡನೇ ತ್ರೈಮಾಸಿಕದ ಅವಧಿಯಲ್ಲಿ 36 ಕೋಟಿ ನಿವ್ವಳ ಲಾಭ ಗಳಿಸಿದೆ.
ಎಂಆರ್ಪಿಎಲ್ ಸಂಸ್ಥೆಗೆ ಎರಡನೇ ತ್ರೈಮಾಸಿಕದಲ್ಲಿ 36 ಕೋಟಿ ರೂ. ಲಾಭ
ಎಂಆರ್ಪಿಎಲ್ ಎರಡನೇ ತ್ರೈ ಮಾಸಿಕದಲ್ಲಿ 9,686 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,262 ಕೋಟಿ ರೂ. ವ್ಯವಹಾರ ಮಾಡಿತ್ತು. ಕೊರೊನಾ ಸಂಕಷ್ಟದ ಮಧ್ಯೆಯು ಮೊದಲ ತ್ರೈಮಾಸಿಕದಲ್ಲಿ ನಷ್ಟದಲ್ಲಿದ್ದ ಎಂಆರ್ಪಿಎಲ್ ಲಾಭಾಂಶದತ್ತ ಮುನ್ನಡೆಯುತ್ತಿದೆ.
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್
ಎಂಆರ್ಪಿಎಲ್ ಎರಡನೇ ತ್ರೈಮಾಸಿಕದಲ್ಲಿ 9,686 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,262 ಕೋಟಿ ರೂ. ವ್ಯವಹಾರ ಮಾಡಿತ್ತು. 2020-21ರ ಅರ್ಧ ವಾರ್ಷಿಕ ಅವಧಿಯಲ್ಲಿ ಎಂಆರ್ಪಿಎಲ್ 484 ಕೋಟಿ ರೂ. ನಷ್ಟ ಅನುಭವಿಸಿದೆ. ಆದರೆ ಎರಡನೇ ತ್ರೈಮಾಸಿಕದಲ್ಲಿ ಚೇತರಿಕೆ ಕಂಡಿದ್ದು ಲಾಭಾಂಶ ಪಡೆದುಕೊಂಡಿದೆ.
ಕೊರೊನಾ ಸಂಕಷ್ಟದ ಮಧ್ಯೆಯು ಮೊದಲ ತ್ರೈಮಾಸಿಕದಲ್ಲಿ ನಷ್ಟದಲ್ಲಿದ್ದ ಎಂಆರ್ಪಿಎಲ್ ಸಂಸ್ಥೆಯು ಲಾಭಾಂಶದತ್ತ ಮುನ್ನಡೆಯುತ್ತಿದೆ.