ಕರ್ನಾಟಕ

karnataka

ETV Bharat / state

3ನೇ ಬಾರಿಗೆ ದೇಶದ ಅತ್ಯುತ್ತಮ ಪಿಎಸ್‌ಯು ಪ್ರಶಸ್ತಿ ತನ್ನದಾಗಿಸಿಕೊಂಡ ಎಂಆರ್‌ಪಿಎಲ್

ಮೂರನೇ ಬಾರಿಗೆ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್​ ಅತ್ಯುತ್ತಮ ಪಿಎಸ್‌ಯು ಪ್ರಶಸ್ತಿ ಪಡೆದುಕೊಂಡಿದೆ.

MRPL Got Best PSU award in the Country
ಪಿಎಸ್‌ಯು ಪ್ರಶಸ್ತಿ ತನ್ನದಾಗಿಸಿಕೊಂಡ ಎಂಆರ್‌ಪಿಎಲ್

By

Published : Dec 29, 2020, 8:10 PM IST

ಮಂಗಳೂರು: ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್‌ ವರ್ಷದ ಮಿನಿರತ್ನ ಉತ್ಪಾದನೆ ವಿಭಾಗದಲ್ಲಿ ಕೊಡಮಾಡುವ ಭಾರತದ ಅತ್ಯುತ್ತಮ 'ಸಾರ್ವಜನಿಕ ವಲಯದ ಸಂಸ್ಥೆ'(ಪಿಎಸ್‌ಯು) ಪ್ರಶಸ್ತಿ -2019' ಅನ್ನು ಮೂರನೇ ಬಾರಿಗೆ ಎಂಆರ್​ಪಿಎಲ್ ಸಂಸ್ಥೆ ತನ್ನದಾಗಿಸಿಕೊಂಡಿದೆ.

ಈ ಪ್ರಶಸ್ತಿಯನ್ನು 2019 ರಲ್ಲಿ ಎಂಆರ್‌ಪಿಎಲ್‌ ಸಂಸ್ಥೆ ನೀಡಿರುವ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ. ಪ್ರಶಸ್ತಿಯು ಅನುಕರಣೀಯ ಕಾರ್ಯಾಚರಣೆಗಳು, ವ್ಯವಸ್ಥೆಗಳು ಮತ್ತು ವ್ಯವಹಾರದ ಚೈತನ್ಯಕ್ಕೆ ಅವುಗಳ ಪ್ರಭಾವದ ಪುರಾವೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್​ (ಎಂಆರ್‌ಪಿಎಲ್) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಡಳಿತದಲ್ಲಿ ಪೆಟ್ರೋಲಿಯಂ (ರಿಫೈನರಿ ಮತ್ತು ಮಾರ್ಕೆಟಿಂಗ್) ಕಾಗ್ನೇಟ್ ಗುಂಪಿನಲ್ಲಿರುವ ‘ಎ’ ಮಿನಿರತ್ನ ಪಿಎಸ್‌ಯು ಆಗಿದೆ.

ಪಿಎಸ್‌ಯು ಪ್ರಶಸ್ತಿ ತನ್ನದಾಗಿಸಿಕೊಂಡ ಎಂಆರ್‌ಪಿಎಲ್

ಓದಿ : ಅಮೆಜಾನ್: ​ಭಾರತದಲ್ಲಿ 11,400 ಕೋಟಿ ರೂ. ಹೂಡಿದ್ರೂ ಲಾಭ ಬಾರದೇ ಬೇಜಾರಾದ ಬೆಜೋಸ್​!

ಕಚ್ಚಾ ತೈಲವನ್ನು ಸಂಸ್ಕರಿಸುವ ವ್ಯವಹಾರದಲ್ಲಿ ಎಂಆರ್‌ಪಿಎಲ್ ತೊಡಗಿಸಿಕೊಂಡಿದ್ದು, ಇದು ಮಂಗಳೂರಿನಲ್ಲಿ ಮೂರು ಸೆಟ್ ಪ್ರಾಥಮಿಕ ಘಟಕಗಳನ್ನು (ಹಂತ 1, 2, ಮತ್ತು 3) ಹೊಂದಿದೆ. ಎಂಆರ್​ಪಿಎಲ್ ಸಂಸ್ಥೆ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳಿಗಾಗಿ ವಿಸ್ತರಣೆ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ತನ್ನ ಚಿಲ್ಲರೆ ಜಾಲವನ್ನು ಸಂಸ್ಕರಣಾಗಾರ ವಲಯದಲ್ಲಿ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ಎಂಆರ್‌ಪಿಎಲ್‌ನಲ್ಲಿ ಉತ್ಪಾದಿಸಲಾದ ಡೀಸೆಲ್ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಎಲ್ಲಾ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಬಳಸಲಾಗುತ್ತಿದೆ.

For All Latest Updates

ABOUT THE AUTHOR

...view details