ಸುಳ್ಯ:ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮೃತ ಪ್ರವೀಣ್ ಕುಟುಂಬಕ್ಕೆ 15 ಲಕ್ಷ ಸಹಾಯ ಹಸ್ತ ನೀಡುವ ಭರವಸೆ ನೀಡಿದರು.
ನಮ್ಮ ಸರ್ಕಾರ ಇಸ್ಲಾಮಿಕ್ ಜಿಹಾದಿ ಮಾನಸಿಕತೆ ಇಲ್ಲವಾಗಿಸುವ ಪ್ರತಿಬದ್ಧತೆ ಹೊಂದಿದೆ: 15 ಲಕ್ಷ ಪರಿಹಾರ ಘೋಷಿಸಿದ ತೇಜಸ್ವಿ ಸೂರ್ಯ - ಪ್ರವೀಣ್ ನೆಟ್ಟಾರು ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ
ನಮ್ಮ ಸರ್ಕಾರ ಇಸ್ಲಾಮಿಕ್ ಜಿಹಾದಿ ಮಾನಸಿಕತೆಯನ್ನು ಇಲ್ಲವಾಗಿಸುವ ಪ್ರತಿಬದ್ಧತೆಯನ್ನು ಹೊಂದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ
ನಂತರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಮತ್ತು ನಮ್ಮ ಸರ್ಕಾರ ಇಸ್ಲಾಮಿಕ್ ಜಿಹಾದಿ ಮಾನಸಿಕತೆ ಇಲ್ಲವಾಗಿಸುವ ಪ್ರತಿಬದ್ಧತೆ ಹೊಂದಿದೆ. ಈ ಸಾವು ಆಗಬಾರದಿತ್ತು. ಯಾರನ್ನು ಹೇಗೆ ನಂಬುವುದು, ಪ್ರವೀಣ್ ಅಂಗಡಿಯಲ್ಲಿ ಕೆಲಸಕಿದ್ದು, ತನ್ನ ಮಗನನ್ನು ಸಾಕಿದ ವ್ಯಕ್ತಿಯ ಅದೇ ಮಗನೇ ಈ ಪ್ರಕರಣದಲ್ಲಿ ಒಬ್ಬ ಆರೋಪಿ. ಹೇಗೆ ಜನರನ್ನು ನಂಬುವುದು. ಈ ಜಿಹಾದಿ ಮಾನಸಿಕತೆ ಸಂಪೂರ್ಣ ಇಲ್ಲದಾಗಬೇಕು ಎಂದು ಅವರು ಹೇಳಿದರು.