ಕರ್ನಾಟಕ

karnataka

ETV Bharat / state

ಮೀನುಗಾರರ ಜೊತೆ ಸಮುದ್ರಕ್ಕೆ ತೆರಳಿದ ಡಿ.ಕೆ. ಸುರೇಶ್: ಸಮಸ್ಯೆ ಆಲಿಸಿದ ಸಂಸದ - Mangaluru fishermen

ಮೀನುಗಾರರ ದುಸ್ತರವಾದ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಸದ ಡಿ.ಕೆ. ಸುರೇಶ್, ಸರ್ಕಾರ ಆದಷ್ಟು ಬೇಗ ಮೀನುಗಾರರ ಸಮಸ್ಯೆಗಳನ್ನು ಆಲಿಸಿ‌ ಶಾಶ್ವತ ಪರಿಹಾರ ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.

mangaluru
ಮೀನುಗಾರರ ಜೊತೆ ಡಿ.ಕೆ.ಸುರೇಶ್ ಮಾತುಕತೆ

By

Published : Apr 13, 2021, 7:30 AM IST

ಮಂಗಳೂರು: ನಗರಕ್ಕೆ ಭೇಟಿ ನೀಡಿದ್ದ ಸಂಸದ ಡಿ.ಕೆ. ಸುರೇಶ್ ಅವರು, ಇತ್ತೀಚೆಗೆ ನಗರದ ಬಂದರು ಪ್ರದೇಶದಿಂದ ಸಮುದ್ರಕ್ಕೆ ಮೀನುಗಾರಿಕೆ ನಡೆಸೋದನ್ನು ಬೋಟ್ ಮೂಲಕ ತೆರಳಿ ವೀಕ್ಷಿಸಿದ್ದು, ಈ ವೇಳೆ ಮೀನುಗಾರರ ಜೊತೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೀನುಗಾರರ ದುಸ್ತರವಾದ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿ, ಸರ್ಕಾರ ಆದಷ್ಟು ಬೇಗ ಮೀನುಗಾರರ ಸಮಸ್ಯೆಗಳನ್ನು ಆಲಿಸಿ‌ ಶಾಶ್ವತ ಪರಿಹಾರ ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.

ಮೀನುಗಾರಿಕೆ ಸಾಹಸಮಯ ಕೆಲಸ. ಇದೀಗ ಮೀನುಗಾರರು ಬಹಳ ಕಷ್ಟದಲ್ಲಿದ್ದು, ತಂತ್ರಜ್ಞಾನ ಅಳವಡಿಸಲು ಬೇಕಾದಷ್ಟು ಬಂಡವಾಳ ಇಲ್ಲ. ಮೀನುಗಾರಿಕೆಯನ್ನೇ ನಂಬಿಕೊಂಡು ಒಂದೂವರೆ ಲಕ್ಷಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿವೆ. ಡೀಸೆಲ್, ಪೆಟ್ರೋಲ್ ದರ ಏರಿಕೆಯಾಗಿರೋದರಿಂದ 6.30 - 7 ರೂ. ಸಬ್ಸಿಡಿ ದೊರೆಯುತ್ತಿದೆ. ಮೀನುಗಾರಿಕೆಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಬಗ್ಗೆ ಸಂಬಂಧಪಟ್ಟ ನಾಯಕರು ಹಾಗೂ ಲೋಕಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೀನುಗಾರರ ಸಮಸ್ಯೆ ಆಲಿಸಿದ ಸಂಸದ ಡಿ.ಕೆ. ಸುರೇಶ್

ಕೋವಿಡ್ ಸಂದರ್ಭದಲ್ಲಿ ಅನೇಕ ನಿರ್ಬಂಧಗಳನ್ನು ಹೇರಲಾಗಿದ್ದು, ಯಾವುದೇ ಆರ್ಥಿಕ ನೆರವು ದೊರಕಿಲ್ಲ.‌ ಆದ್ದರಿಂದ ಈ ಒಂದು ವರ್ಷದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಆದ್ದರಿಂದ ಸರ್ಕಾರ ಇವರ ಸಮಸ್ಯೆಗಳತ್ತ ಗಮನ ಹರಿಸಬೇಕು. ಕರಾವಳಿಯ ನಾಯಕರು ಮೀನುಗಾರರ ಪರವಾಗಿ ದನಿ ಎತ್ತುತ್ತಾರೆಂದು ಭಾವಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭ ರಾತ್ರಿ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಡಿ ಕೆ ಸುರೇಶ್​, ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಬೆಳಗ್ಗೆ ಓಡಾಟ ಮಾಡುವವರ ಮೇಲೆ ನಿಗಾ ಇರಿಸಬೇಕೇ ಹೊರತು, ರಾತ್ರಿ ಕರ್ಫ್ಯೂ ಹೇರೋದು ಎಷ್ಟು ಸರಿ. ಇದು ಸಂಪೂರ್ಣ ಅವೈಜ್ಞಾನಿಕ ಕ್ರಮ ಎಂದು ಜರಿದರು. ಬೆಳಗಿನ ಹೊತ್ತು ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಬೇಕಾದರೆ ಕೆಲವೊಂದು ನಿರ್ಬಂಧಗಳನ್ನು ಹೇರಬಹುದು. ಆದ್ದರಿಂದ ರಾತ್ರಿ ಕರ್ಫ್ಯೂ ಹಾಸ್ಯಾಸ್ಪದ ಪದ. ಈ ಮೂಲಕ ಕೊರೊನಾ ತಡಿತೀವಿ ಎಂದು ಬೆದರಿಕೆ ಒಡ್ಡೋದು ಎಷ್ಟು ಸರಿ ಎಂದು ಸಂಸದ ಡಿ ಕೆ ಸುರೇಶ್​ ಪ್ರಶ್ನಿಸಿದರು.

ABOUT THE AUTHOR

...view details