ಸುಬ್ರಹ್ಮಣ್ಯ/ದಕ್ಷಿಣಕನ್ನಡ: ಪತಿಯ ನಿಧನದಿಂದ ಮಹಿಳೆಗೆ ತನ್ನ ಮಕ್ಕಳನ್ನು ನೋಡಿಕೊಳ್ಳಲು ಕಷ್ಟಸಾಧ್ಯವಾದ ಹಿನ್ನೆಲೆ ತಾಯಿಯೊಬ್ಬರು ಮಕ್ಕಳ ರಕ್ಷಣಾ ಘಟಕ ಮಂಗಳೂರಿಗೆ ಪತ್ರ ಮುಖೇನ ಮಾಹಿತಿ ನೀಡಿದ್ದು, ಅಲ್ಲಿನ ಅಧಿಕಾರಿಗಳ ಆದೇಶದಂತೆ ಮೂವರು ಮಕ್ಕಳನ್ನು ಪುತ್ತೂರಿನ ಆಶ್ರಮಕ್ಕೆ ಸೇರಿಸಿರುವ ಬಗ್ಗೆ ವರದಿಯಾಗಿದೆ.
ಆರ್ಥಿಕ ಸಂಕಷ್ಟ.. ಮಕ್ಕಳನ್ನು ಸಾಕಲು ಸಾಧ್ಯವಿಲ್ಲದೇ ತಾಯಿಯ ಸ್ವ-ಇಚ್ಛೆಯಂತೆ ಮೂವರು ಮಕ್ಕಳು ಆಶ್ರಮಕ್ಕೆ - ಮಕ್ಕಳ ರಕ್ಷಣಾ ಘಟಕ ಮಂಗಳೂರು ಸುದ್ದಿ
ಪತಿಯ ನಿಧನದ ನಂತರದಲ್ಲಿ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ ಪತ್ನಿಗೆ ಜೀವನ ನಡೆಸಲು ಕಷ್ಟವಾಗಿತ್ತು. ಜೊತೆಗೆ ಅವರ ಅತ್ತೆ ಹಾಗೂ ಮಾವ ವಯೋವೃದ್ಧರಾಗಿದ್ದರಿಂದ ದುಡಿಯಲು ಅಶಕ್ತರಾಗಿದ್ದರು. ಇದರಿಂದಾಗಿ ತಾನು ಸಂಕಷ್ಟದಲ್ಲಿರುವ ವಿಷಯವನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ..
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೋಡಿಗದ್ದೆ ಎಂಬಲ್ಲಿ ವಾಸಿಸುತ್ತಿದ್ದ ಗೋಪಾಲಕೃಷ್ಣ ಎಂಬುವರು ಇತ್ತೀಚೆಗೆ ನಿಧನರಾಗಿದ್ದರು. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದರು. ಪತಿಯ ನಿಧನದ ನಂತರದಲ್ಲಿ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ ಪತ್ನಿಗೆಜೀವನ ನಡೆಸಲು ಕಷ್ಟವಾಗಿತ್ತು. ಜೊತೆಗೆ ಅವರ ಅತ್ತೆ ಹಾಗೂ ಮಾವ ವಯೋವೃದ್ಧರಾಗಿದ್ದರಿಂದ ದುಡಿಯಲು ಅಶಕ್ತರಾಗಿದ್ದರು. ಇದರಿಂದಾಗಿ ತಾನು ಸಂಕಷ್ಟದಲ್ಲಿರುವ ವಿಷಯವನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಆಶ್ರಮಕ್ಕೆ ಸೇರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮಂಗಳೂರಿನ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಪ್ರಯತ್ನದ ಫಲವಾಗಿ, ಮಹಿಳೆಯ ಸ್ವ-ಇಚ್ಚೆಯಂತೆ ಮಕ್ಕಳ ತಾಯಿ, ಕುಟುಂಬದ ಸಂಬಂಧಿಕರ ಸಹಕಾರದಲ್ಲಿ ಮಹಿಳೆಯ ಮೂವರು ಮಕ್ಕಳನ್ನು ಪುತ್ತೂರಿನ ನೆಲ್ಲಿಕಟ್ಟೆ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಕರೆದೊಯ್ದು ಸೇರ್ಪಡೆ ಮಾಡಿದ್ದಾರೆ.