ಮಂಗಳೂರು:ರಸ್ತೆ ಅಪಘಾತದಲ್ಲಿ ತನ್ನ ಮರಿಯನ್ನು ಕಳೆದುಕೊಂಡ ನಾಯಿಯೊಂದು ರೋದಿಸುತ್ತಿದ್ದ ದೃಶ್ಯ ಎಲ್ಲರ ಮನಕಲುಕಿತು. ಮರಿಯ ಕಳೇಬರ ಬಿಟ್ಟು ಹೋಗದೇ ಮರಗುತ್ತಿದ್ದ ಶ್ವಾನ ನೋಡಿದ ಜನರ ಕಣ್ಣಾಲಿಗಳು ನೀರಾದವು.
ಸತ್ತ ಮರಿಯನ್ನು ಬಿಡಲೊಲ್ಲದ ಅಮ್ಮ... ಮನಕಲುಕಿದ ತಾಯಿಯ ರೋದನ - undefined
ಅಲ್ಲಿ ತಾಯಿಯ ಮಮತೆ, ಅಸಹಾಯಕತೆ ಕಂಡಿತು. ತನ್ನ ಪ್ರೀತಿಯ ಮರಿಯನ್ನು ಕಳೆದುಕೊಂಡ ತಾಯಿಯ ರೋದನ ಎಲ್ಲರ ಮನ ಕಲುಕಿತು.
ತಾಯಿ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜ ರಸ್ತೆಯಲ್ಲಿ ಈ ದೃಶ್ಯ ಕಂಡುಬಂತು. ಕಡಬದ ಪಂಜ ರಸ್ತೆಯ ಮೆಸ್ಕಾಂ ಕಚೇರಿ ಸಮೀಪದಲ್ಲಿ ನಾಯಿ ಮರಿಯೊಂದು ವಾಹನಕ್ಕೆ ಸಿಲುಕಿ ಮೃತಪಟ್ಟಿತ್ತು. ಇನ್ನು ತಾಯಿ ನಾಯಿ ಮರಿಯ ಪಕ್ಕದಲ್ಲಿ ನಿಂತು ರೋದಿಸುತ್ತಿತ್ತು. ಜನರು ಓಡಿಸಲು ಯತ್ನಿಸಿದರೂ ಕೂಡ ತಾಯಿ ಮಾತ್ರ ಕದಲಲಿಲ್ಲ.
ಜೀವವಿಲ್ಲದ ತನ್ನ ಮರಿ ಬಳಿ ತಾಯಿ ಪಡುತ್ತಿದ್ದ ಸಂಕಟ ಕಂಡು ಜನರೂ ಕೂಡ ಮರುಗಿದರು.