ಕರ್ನಾಟಕ

karnataka

By

Published : Mar 1, 2023, 8:50 PM IST

ETV Bharat / state

ಮಂಗಳೂರು: ಇಬ್ಬರು ಮಕ್ಕಳನ್ನು ಸಾಯಿಸಲು ಯತ್ನ, ತಾಯಿಯೂ ಆತ್ಮಹತ್ಯೆ: ಒಬ್ಬ ಮಗಳು ಪ್ರಾಣಾಪಾಯದಿಂದ ಪಾರು

ಮಂಗಳೂರಿನ ಕೊಡಿಯಾಲ್ ಗುತ್ತುವಿನಲ್ಲಿ ತನ್ನಿಬ್ಬರು ಮಕ್ಕಳನ್ನು ಸಾಯಿಸಲು ಯತ್ನಿಸಿ, ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಂಗಳೂರು
ಮಂಗಳೂರು

ಮಂಗಳೂರು : ಇಬ್ಬರು ಮಕ್ಕಳನ್ನೂ ಸಾಯಿಸಲು ಯತ್ನಿಸಿ ಕೊನೆಗೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕೊಡಿಯಾಲ್ ಗುತ್ತುವಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಡಿಯಾಲ್ ಗುತ್ತಿನ ವಿಜಯ (33), ಸುಮುಖ(4) ಸಾವನ್ನಪ್ಪಿದವರು. ಯಜ್ನ ಎಂಬ 12 ವರ್ಷದ ಬಾಲಕಿ ಸಾವಿನಿಂದ ಪಾರಾಗಿದ್ದಾರೆ.

ವಿಜಯ ಅವರು ತನ್ನಿಬ್ಬರು ಮಕ್ಕಳನ್ನು ಸಾಯಿಸಲು ಪ್ರಯತ್ನಿಸಿದ್ದಾರೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಲ್ಲಿ 4 ವರ್ಷದ ಸುಮುಖ ಸಾವಿಗೀಡಾಗಿದ್ದಾರೆ. ಯಜ್ಞ ಎಂಬ 12 ವರ್ಷದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈಕೆಯನ್ನು ಆತ್ಮಹತ್ಯೆ ವೇಳೆ ಕಾಲಿಗೆ ಟೇಬಲ್ ತಾಗಿದ್ದು ಇದರಿಂದ ಆಕೆ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.

ಸಾವಿನಿಂದ ಪಾರಾಗಿ ಬಂದ ಬಾಲಕಿ ಮನೆಯಿಂದ ಹೊರಬಂದು ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿದ್ದಾಳೆ. ಸ್ಥಳೀಯರು ಬಂದು ನೋಡಿದಾಗ ವಿಜಯ ಮತ್ತು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಬರ್ಕೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯ ಅವರಿಗೆ ಎರಡು ಮದುವೆಯಾಗಿತ್ತು. ಮೊದಲ ಮದುವೆಯಾದ ಬಳಿಕ ಗಂಡ ಸಾವನ್ನಪ್ಪಿದ್ದರು. ಆ ಬಳಿಕ ಆರೇಳು ವರ್ಷದ ನಂತರ ವಿಜಯ ಅವರಿಗೆ ಎರಡನೇ ಮದುವೆಯಾಗಿತ್ತು. ಕೆಲ ತಿಂಗಳ ಹಿಂದೆ ಎರಡನೇ ಮದುವೆಯಾಗಿದ್ದ ಗಂಡನೂ ಸಾವನ್ನಪ್ಪಿದ್ದ. ವಿಜಯ ಅವರು ತನ್ನಿಬ್ಬರು ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ಟೋಲ್ ಗೇಟ್​ನ ಕ್ಯಾಶ್ ಕೌಂಟರ್​ಗೆ ಡಿಕ್ಕಿ ಹೊಡೆದ ಲಾರಿ (ದಾವಣಗೆರೆ): ಇದು ಮಂಗಳೂರಿನ ಆತ್ಮಹತ್ಯೆ ಸುದ್ದಿಯಾದರೆ, ಇನ್ನು ದಾವಣಗೆರೆಯಲ್ಲಿ ಇತ್ತೀಚೆಗೆ ಚಾಲಕನ ನಿಯಂತ್ರಣ ತಪ್ಪಿ ಟೋಲ್​ಗೇಟ್ ಕ್ಯಾಶ್ ಕೌಂಟರ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಅಷ್ಟೇ ಅಲ್ಲ ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಿಂದ ಟೋಲ್ ಗೇಟ್ ಸಿಬ್ಬಂದಿ ಪಾರಾಗಿದ್ದಾರೆ.

ಹುಬ್ಬಳ್ಳಿ‌ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಲಾರಿ ಟೋಲ್​ಗೇಟ್ ಕಡೆಗೆ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಕ್ಯಾಶ್ ಕೌಂಟರ್​​ಗೆ ಡಿಕ್ಕಿ ಹೊಡೆದಿದೆ. ಇನ್ನೇನು ಲಾರಿ ಡಿಕ್ಕಿ ಹೊಡೆಯುತ್ತೆ ಎಂಬುದನ್ನು ಗಮನಿಸಿದ ಟೋಲ್ ಗೇಟ್ ಸಿಬ್ಬಂದಿ ಪಕ್ಕಕ್ಕೆ ಜಿಗಿದು ಪ್ರಾಣವನ್ನು ಕಾಪಾಡಿಕೊಂಡಿದ್ದಾರೆ.

ಈ ಘಟನೆ ಕಳೆದ ದಿನ‌ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಇನ್ನು ಇದಲ್ಲದೆ ಈ ಹೆಬ್ಬಾಳು ಟೋಲ್​ಗೇಟ್​ನಲ್ಲಿ ಇಂತಹ ಅಪಘಾತಗಳು ನಡೆಯುತ್ತಲೇ ಇದ್ದು, ಇದಕ್ಕೆ ಅತಿ ವೇಗವೇ ಕಾರಣವಾಗಿದೆ. ಇನ್ನು ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್​ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಟೋಲ್ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದೇ ರೋಚಕ :ಹುಬ್ಬಳಿ ಕಡೆಯಿಂದ ಅತೀ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ಟೋಲ್​ಗೇಟ್​ನ ಕ್ಯಾಶ್ ಕೌಂಟರ್​ಗೆ ಬಂದು ಅಪ್ಪಳಿಸಿದೆ. ಕ್ಯಾಶ್ ಕೌಂಟರ್​ನಲ್ಲಿದ್ದ ಟೋಲ್ ಸಿಬ್ಬಂದಿ ಕೌಂಟರ್​ನಿಂದ ಹೊರ ಹಾರಿ ತಮ್ಮ ಪ್ರಾಣ ಉಳಿಸಿಕೊಂಡ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಪರಿಣಾಮ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರಾಣ ಹಾನಿಯಾಗಿಲ್ಲ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ :ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ

ABOUT THE AUTHOR

...view details