ಮಂಗಳೂರು:ಇಲ್ಲಿನ ಶಕ್ತಿನಗರದ ಪದವು ನೀತಿ ನಗರದಲ್ಲಿ ತಾಯಿ -ಮಗು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮಂಗಳೂರಲ್ಲಿ ತಾಯಿ-ಮಗು ದಿಢೀರ್ ನಾಪತ್ತೆ - ಮಂಗಳೂರಲ್ಲಿ ತಾಯಿ ,ಮಗು ನಾಪತ್ತೆ ಲೆಟೆಸ್ಟ್ ನ್ಯೂಸ್
ಇಲ್ಲಿನ ಶಕ್ತಿನಗರದ ಪದವು ನೀತಿ ನಗರದಲ್ಲಿ ತಾಯಿ ಮತ್ತು ಮಗು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Mother and son missing
ಶಕ್ತಿನಗರದ ಪದವು ನೀತಿನಗರ ನಿವಾಸಿ ಸರಿತಾ ಸಿಂಗ್ (32) ಅವರ ಪುತ್ರ ಅಭಿಷೇಕ್ (7)ನೊಂದಿಗೆ ನಾಪತ್ತೆಯಾಗಿದ್ದಾರೆ. ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಇವರು ಕಾಣೆಯಾಗಿದ್ದು, ಮನೆಯಲ್ಲಿರುವ ಬಟ್ಟೆ ಬರೆ, ಮಗುವಿನ ಪುಸ್ತಕ, ಬ್ಯಾಗ್ ಹಾಗೂ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.