ಸುಳ್ಯ(ದಕ್ಷಿಣ ಕನ್ನಡ):ಮದುವೆಗೆ ತೆರಳುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾದ ಪರಿಣಾಮ ತಾಯಿ ಹಾಗೂ ಪುಟ್ಟ ಮಗು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ಸಮೀಪದ ಜಾಲ್ಸುರು - ಕಾಸರಗೋಡು ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ.
ಪರಪ್ಪು ನಿವಾಸಿ ಶಾನ್ ಎಂಬುವರ ಪತ್ನಿ ಶಾಹಿನಾ (28) ಮತ್ತು ಅವರ ಮೂರು ವರ್ಷದ ಮಗು ಶಾಜಾ ಮೃತಪಟ್ಟವರು ಎಂದು ತಿಳಿದುಬಂದಿದೆ. ಇನ್ನೋವಾ ಕಾರಿನಲ್ಲಿದ್ದ ಇತರ ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿ, ಬಳಿಕ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ರನಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.