ಬಂಟ್ವಾಳ :ಹೆರಿಗೆ ವೇಳೆ ಮಗು ನಂತರ ತಾಯಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಬಂಟ್ವಾಳದಲ್ಲಿ ಹೃದಯ ವಿದ್ರಾವಕ ಘಟನೆ.. ಹೆರಿಗೆ ವೇಳೆ ಮಗು, ಬಳಿಕ ತಾಯಿ ಸಾವು - ಬಂಟ್ವಾಳ ಕಾಲೇಜು ರೋಡ್ ನಿವಾಸಿ
ಬಂಟ್ವಾಳ ಕಾಲೇಜು ರೋಡ್ ನಿವಾಸಿ ಭವಾನಿ ಶಂಕರ್ ಅವರ ಪತ್ನಿ ಕಾಜಲ್ ಶೆಟ್ಟಿ (25) ಮೃತಪಟ್ಟವರು. ಶನಿವಾರ ರಾತ್ರಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಹೆರಿಗೆಗೆಂದು ದಾಖಲಿಸಲಾಗಿತ್ತು. ಭಾನುವಾರ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು..
ಹೆರಿಗೆ ವೇಳೆ ಮಗು, ಬಳಿಕ ತಾಯಿ ಸಾವು
ಬಂಟ್ವಾಳ ಕಾಲೇಜು ರೋಡ್ ನಿವಾಸಿ ಭವಾನಿ ಶಂಕರ್ ಅವರ ಪತ್ನಿ ಕಾಜಲ್ ಶೆಟ್ಟಿ (25) ಮೃತಪಟ್ಟವರು. ಶನಿವಾರ ರಾತ್ರಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಹೆರಿಗೆಗೆಂದು ದಾಖಲಿಸಲಾಗಿತ್ತು. ಭಾನುವಾರ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಈ ವೇಳೆ ಮಗು ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ತೀವ್ರ ರಕ್ತಸ್ರಾವದ ಹಿನ್ನೆಲೆ, ಮಹಿಳೆಯೂ ಗಂಭೀರ ಸ್ಥಿತಿಯಲ್ಲಿದ್ದರು. ರಾತ್ರಿ ವೇಳೆ ಮಹಿಳೆಯೂ ಮೃತಪಟ್ಟಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಇದೀಗ ತಾಯಿ, ಮಗು ಇಬ್ಬರೂ ಮೃತಪಟ್ಟಿದ್ದು, ಪತಿ ಆಘಾತಕ್ಕೊಳಗಾಗಿದ್ದಾರೆ.