ಮಂಗಳೂರು:ದಿನೇ ದಿನೆ ಕೋವಿಡ್ ಉಲ್ಭಣಗೊಳ್ಳುತ್ತಿದೆ. ಜನರಲ್ಲಿ ಸೋಂಕು ತಗುಲುವ ಭಯ ಮೊದಲಿಗಿಂತಲೂ ಹೆಚ್ಚಾಗಿದೆ. ಕೊರೊನಾ ಭೀತಿಯಿಂದ ಕೋವಿಡ್ ಟೆಸ್ಟ್ಗೆ ಒಳಗಾಗುವವರ ಸಂಖ್ಯೆ ಕೂಡ ಹೆಚ್ಚಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ರೋಗ ಲಕ್ಷಣ ಇರುವವರ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಬೆಂಗಳೂರು ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಹೆಚ್ಚಿನ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ. ಈ ಕಾರಣದಿಂದಾಗಿ ಸಹಜವಾಗಿ ಭಯಭೀತರಾಗಿರುವ ಜನರು ಕೊರೊನಾ ಪರೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ.
ಪ್ರಾಥಮಿಕ ಸಂಪರ್ಕ, ಸೋಂಕು ಲಕ್ಷಣ ಇರುವವರಿಗೆ ಪರೀಕ್ಷೆ:
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ರೋಗ ಲಕ್ಷಣ ಇರುವವರ ಪರೀಕ್ಷೆಗೆ ಮೊದಲ ಆದ್ಯತೆ ನೀಡುತ್ತಿದೆ. ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರಲ್ಲಿ ರೋಗ ಲಕ್ಷಣಗಳಿದ್ದರೆ ಮತ್ತು ರೋಗ ಲಕ್ಷಣಗಳಿದ್ದು ಪರೀಕ್ಷೆಗೆ ಬರುವ ಇತರರ ಕೊರೊನಾ ಪರೀಕ್ಷೆಯನ್ನು ಮೊದಲ ಆದ್ಯತೆ ಮೇಲೆ ಮಾಡಲಾಗುತ್ತಿದೆ.
4,000ವರೆಗೆ ಕೋವಿಡ್ ಟೆಸ್ಟ್: