ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸೌಲಭ್ಯ ನೀಡುತ್ತಿದೆ ಮಸೀದಿ ! - Mosque supplying oxygen to Corona infected

ಧಾರ್ಮಿಕ ಕೇಂದ್ರಗಳು ಆಯಾ ಧರ್ಮದ ನಂಬಿಕೆಗೆ ತಕ್ಕಂತೆ ಚಟುವಟಿಕೆಗಳನ್ನು ನಡೆಸುತ್ತದೆ. ಆದರೆ ಮಂಗಳೂರಿನ ಮಸೀದಿಯೊಂದು ಸಾಮಾಜಿಕ ಕಾಳಜಿಗಳೊಂದಿಗೆ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸೆಂಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದೆ.

ಕೊರೊನಾ ಸೋಂಕಿತರಿಗೆ ನೀಡುತ್ತಿದೆ ಪ್ರಾಣವಾಯು!
ಕೊರೊನಾ ಸೋಂಕಿತರಿಗೆ ನೀಡುತ್ತಿದೆ ಪ್ರಾಣವಾಯು!

By

Published : Jun 24, 2021, 8:02 PM IST

Updated : Jun 24, 2021, 10:04 PM IST

ಮಂಗಳೂರು: ನಗರದ ಫಳ್ನೀರ್​ನ ಯುನಿಟಿ ಆಸ್ಪತ್ರೆ ಹಿಂಭಾಗದಲ್ಲಿರುವ ಮಸ್ಜಿದುಲ್ ಎಹ್ಸಾನ್ ಎಂಬ ಮಸೀದಿ ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಗಮನಸೆಳೆದಿದೆ.

ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸೌಲಭ್ಯ ನೀಡುತ್ತಿದೆ ಮಸೀದಿ !

ಹೌದು.. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಇಡಿ ದೇಶವನ್ನು ತಲ್ಲಣಗೊಳಿಸಿತ್ತು. ಈ ಹಿನ್ನೆಲೆ ಮಸೀದಿಯಲ್ಲಿ ನೀಡುವ ಆಕ್ಸಿಜನ್​ ವ್ಯವಸ್ಥೆಗೆ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ (KKMA) ಕೈ ಜೋಡಿಸಿದ್ದು,10 ಲೀಟರ್​ನ 35 ಆಕ್ಸಿಜನ್​ ಸಿಲಿಂಡರ್ ಗಳನ್ನು ಕಳುಹಿಸಿಕೊಟ್ಟಿದೆ. ಕೆಕೆಎಂಎ ಆಕ್ಸಿಜನ್ ಸಿಲಿಂಡರ್ ಜೊತೆಗೆ ಅದನ್ನು ಬಳಸಲು ರೆಗ್ಯುಲೇಟರ್ ಮತ್ತು ಪಲ್ಸ್ ಮೀಟರ್​ನ್ನು ಕೊರೊನಾ ರೋಗಿಗಳಿಗೆ ನೀಡಿದೆ.

ಈ ಮಸೀದಿ ನಮಾಜ್ ಮಾಡುವ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೆ, ಇಂಥ ಕಾರ್ಯಗಳ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದೆ. ಖಾಸಗಿ ಆಸ್ಪತ್ರೆಯ ಸಹಯೋಗದೊಂದಿಗೆ ಕೊರೊನಾ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಕೆಕೆಎಂಎ ನೀಡಿದ ಆಕ್ಸಿಜನ್​ನಲ್ಲಿ ಧರ್ಮಭೇಧವಿಲ್ಲದೆ ಕೊರೊನಾ ಸೋಂಕಿತರಿಗೆ ನೀಡಲಾಗಿದ್ದು, ಈ ಸಾಮಾಜಿಕ ಕಾರ್ಯ ಮಸೀದಿ ಸಮಿತಿಗೂ ಖುಷಿ ತಂದಿದೆ.

ಇನ್ನೂ ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಕೊರತೆ ಕಾಣಿಸಿಕೊಂಡಾಗ ಮಂಗಳೂರಿನಲ್ಲಿ ಇಂತಹ ಸಮಸ್ಯೆ ಎದುರಾದರೆ ಮಸೀದಿಯಲ್ಲಿ ಕೊರೊನಾ ಕೇರ್ ಸೆಂಟರ್ ಮಾಡಲು ಬೆಡ್​ಗಳನ್ನು ತರಿಸಿಟ್ಟುಕೊಳ್ಳಲಾಗಿತ್ತು.

ಓದಿ:ರಾಜ್ಯದಲ್ಲಿಂದು 3,979 ಮಂದಿಗೆ ಕೋವಿಡ್ ಪಾಸಿಟಿವ್, 138 ಮಂದಿ ಸಾವು

Last Updated : Jun 24, 2021, 10:04 PM IST

ABOUT THE AUTHOR

...view details