ಕರ್ನಾಟಕ

karnataka

ETV Bharat / state

ಮಂಗಳೂರು: ನೈತಿಕ ಪೊಲೀಸ್ ಗಿರಿ ಆರೋಪ.. ವೈರಲ್ ವಿಡಿಯೋ ಆಧರಿಸಿ ಐವರ ಬಂಧನ - ಮಂಗಳೂರು ವಿಡಿಯೋ ವೈರಲ್

ಮಂಗಳೂರಿನ ಸುರತ್ಕಲ್​ನಲ್ಲಿ ಒಂದು ಕೋಮಿನ ಗುಂಪೊಂದು ಕಾರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ನಡೆಸಿರುವ ಆರೋಪ ಕೇಳಿ ಬಂದಿದೆ.

ಸುರತ್ಕಲ್​ನಲ್ಲಿ ನೈತಿಕ ಪೊಲೀಸ್ ಗಿರಿ
ಸುರತ್ಕಲ್​ನಲ್ಲಿ ನೈತಿಕ ಪೊಲೀಸ್ ಗಿರಿ

By

Published : Sep 28, 2021, 9:01 AM IST

Updated : Sep 28, 2021, 2:24 PM IST

ಮಂಗಳೂರು : ಮಂಗಳೂರಿನ ಸುರತ್ಕಲ್​ನಲ್ಲಿ ಭಾನುವಾರ ನೈತಿಕ ಪೊಲೀಸ್ ಗಿರಿ ನಡೆದಿರುವ ಆರೋಪ ಕೇಳಿ ಬಂದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಆಧರಿಸಿ ಸುರತ್ಕಲ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಸುರತ್ಕಲ್​ನಲ್ಲಿ ನೈತಿಕ ಪೊಲೀಸ್ ಗಿರಿ ಆರೋಪ : ವೈರಲ್ ವಿಡಿಯೋ

ನಗರದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಕಾರಿನಲ್ಲಿ ಉಡುಪಿಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ, ಸುರತ್ಕಲ್​ನಲ್ಲಿ ಗುಂಪೊಂದು ಅಡ್ಡಗಟ್ಟಿದೆ. ಕಾರಿನಲ್ಲಿ ಅನ್ಯಮತೀಯ ಜೋಡಿಯಿದೆ ಎಂದು ಭಾವಿಸಿ ಒಂದು ಕೋಮಿನ ಯುವಕರ ಗುಂಪು ಕಾರಿನಲ್ಲಿದ್ದವರ ಮೇಲೆ ಹಲ್ಲೆಗೆ ಯತ್ನಿಸಿದೆ. ಈ ಸಂದರ್ಭದಲ್ಲಿ ಮಂಗಳೂರಿನ ಟ್ರಾಫಿಕ್ ಇನ್ಸ್​​ಪೆಕ್ಟರ್ ಒಬ್ಬರು ಹಲ್ಲೆ ತಡೆಯಲು ಯತ್ನಿಸಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮಂಗಳೂರ: ಅತ್ಯಾಚಾರ ಆರೋಪ ಸಾಬೀತು; ಅಪರಾಧಿಗೆ ಕಠಿಣ ಶಿಕ್ಷೆ, 85 ಸಾವಿರ ರೂ. ದಂಡ

ವೈರಲ್ ವಿಡಿಯೋ ಆಧರಿಸಿ ಸುರತ್ಕಲ್ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸ್ ಕಮಿಷನರ್ ಶಶಿಕುಮಾರ್​.ಎನ್ ಪ್ರತಿಕ್ರಿಯೆ

ಈ ಸಂಬಂಧ ಪೊಲೀಸ್ ಕಮಿಷನರ್​ ಶಶಿಕುಮಾರ್ ಪ್ರತಿಕ್ರಿಯಿಸಿ, ನಗರದ ದೇರಳಕಟ್ಟೆಯಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಯುವತಿಯರು, ಮೂವರು ಯುವಕರು ಮಲ್ಪೆ ಬೀಚ್​​ಗೆ ಹೋಗಿದ್ದರು. ಇವರೆಲ್ಲರೂ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಕಾರಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳಿದ್ದರೆಂದು ಭಾವಿಸಿ ಈ ದಾಳಿ ನಡೆಸಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ ಎಂದರು.

ವಿದ್ಯಾರ್ಥಿಗಳಲ್ಲಿ ಓರ್ವನನ್ನು ದುಷ್ಕರ್ಮಿಗಳು ಎಳೆದಾಡಿದ್ದರ ಪರಿಣಾಮವಾಗಿ ಅವನಿಗೆ ಸಣ್ಣಪುಟ್ಟ ಗಾಯಗಳಾಗಿವೆ‌. ಈ‌ ಸಂದರ್ಭ ಅದೇ ದಾರಿಯಲ್ಲಿ ಕಾರ್ಯನಿಮಿತ್ತ ಬರುತ್ತಿದ್ದ ಉತ್ತರ ಸಂಚಾರಿ ಪೊಲೀಸ್ ಇನ್​ಸ್ಪೆಕ್ಟರ್ ಷರೀಫ್​ ಅವರು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿದೆ.‌ ವಿದ್ಯಾರ್ಥಿಗಳಲ್ಲೋರ್ವ ನೀಡಿರುವ ದೂರಿನನ್ವಯ ಹಲ್ಲೆ ಮಾಡಿದವರ ಬಂಧನ ಮಾಡಲಾಗಿದೆ ಎಂದು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್​.ಎನ್ ಹೇಳಿದ್ದಾರೆ.

Last Updated : Sep 28, 2021, 2:24 PM IST

ABOUT THE AUTHOR

...view details