ಮಂಗಳೂರು: ನಗರದ ಕಂಕನಾಡಿಯ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಂದಿಗೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅನ್ಯಕೋಮಿನ ಯುವಕ ಬೈಕ್ನಲ್ಲಿ ಕರೆದುಕೊಂಡು ಹೋದ ವಿಚಾರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಬಜರಂಗದಳ ಕಾರ್ಯಕರ್ತರು ಯುವತಿಯ ಪೋಷಕರಿಗೆ ಈ ಮಾಹಿತಿ ತಿಳಿಸಿ ಕರೆಸಿಕೊಂಡಿದ್ದರು ಎನ್ನಲಾಗಿದೆ.
ಯುವತಿಯ ಪೋಷಕರು ಮತ್ತು ಪೊಲೀಸರೊಂದಿಗೆ ಆಭರಣ ಮಳಿಗೆ ಒಳಗೆ ಹೋದ ಭಜರಂಗದಳ ಕಾರ್ಯಕರ್ತರು, ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಯುವಕ ತನ್ನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ದೂರನ್ನು ನೀಡಿದ್ದರೆ, ಯುವಕ ತನ್ನ ಮೇಲೆ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ತಾಯಿ ಪ್ರತಿ ದೂರು ನೀಡಿದ್ದಾರೆ.