ಮಂಗಳೂರು:ಇಂದು ಚಂದ್ರ ದರ್ಶನವಾಗದ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಈದ್ ಉಲ್ ಫಿತರ್ ಆಚರಿಸಲು ನಿರ್ಧರಿಸಲಾಗಿದೆ. ಮಂಗಳವಾರ ರಾತ್ರಿ ಪ್ರಥಮ ಚಂದ್ರದರ್ಶನ ಆಗಲಿರುವುದರಿಂದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 3 ರಂದು ಈದ್ ಉಲ್ ಫಿತರ್ ಆಚರಿಸಲಾಗುತ್ತದೆ.
ಇಂದು ರಾತ್ರಿ ಶವ್ವಾಲ್ನ ಪ್ರಥಮ ಚಂದ್ರ ದರ್ಶನವಾಗದ ಕಾರಣ ಸೋಮವಾರ 30ನೇ ರಂಜಾನ್ ಉಪವಾಸ ಪೂರ್ತಿಗೊಳಿಸಲು ಮತ್ತು ಮಂಗಳವಾರದಂದು ಈದುಲ್ ಫಿತ್ರ್ ಆಚರಿಸಲು ದ.ಕ.ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಲ್ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಕರೆ ನೀಡಿದ್ದಾರೆ.