ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಮಧ್ಯಾಹ್ನದ ವೇಳೆಗೆ ಮುಂಗಾರು ಮಳೆ ಆಗಮನವಾಗಿದೆ.
ಒಂದು ದಿನ ಮುಂಚಿತವಾಗಿಯೇ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಮುಂಗಾರು - ಕೇರಳಕ್ಕೆ ಜೂನ್ 1 ರಂದು ಪ್ರವೇಶಿಸಿದ ಮುಂಗಾರು
ಕೇರಳಕ್ಕೆ ಜೂನ್ 1 ರಂದು ಪ್ರವೇಶಿಸಿದ ಮುಂಗಾರು, ಜೂನ್ 5 ಕ್ಕೆ ಕರ್ನಾಟಕ ಪ್ರವೇಶಿಸುವ ನಿರೀಕ್ಷೆ ಇರಿಸಲಾಗಿತ್ತು. ಆದರೆ ಈ ನಿರೀಕ್ಷೆಗಿಂತ ಒಂದು ದಿನದ ಮುಂಚಿತವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಆಗಮನವಾಗಿದೆ.
![ಒಂದು ದಿನ ಮುಂಚಿತವಾಗಿಯೇ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಮುಂಗಾರು Monsoon arrives in Dakshina Kannada one day early](https://etvbharatimages.akamaized.net/etvbharat/prod-images/768-512-7475327-229-7475327-1591270796911.jpg)
ಒಂದು ದಿನ ಮುಂಚಿತವಾಗಿಯೇ ದಕ್ಷಿಣ ಕನ್ನಡ ಪ್ರವೇಶಿಸಿದ ಮುಂಗಾರು..
ಸಾಧಾರಣವಾಗಿ ಕೇರಳಕ್ಕೆ ಪ್ರವೇಶಿಸಿದ್ದ ಒಂದೆರಡು ದಿನಗಳಲ್ಲಿ ಮುಂಗಾರು ಕರ್ನಾಟಕ ಕರಾವಳಿಯನ್ನು ಪ್ರವೇಶಿಸುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಕೇರಳದಲ್ಲಿ ಮುಂಗಾರು ದುರ್ಬಲಗೊಂಡ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಒಂದೆರಡು ದಿನ ವಿಳಂಬವಾಗಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಮತ್ತು ನಿಸರ್ಗ ಚಂಡಮಾರುತ ಪ್ರಭಾವದಿಂದ ಮುಂಗಾರು ಆಗಮನಕ್ಕೆ ಮುಂಚೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿತ್ತು. ಮುಂಗಾರು ಮಳೆ ಮಧ್ಯಾಹ್ನ ಆರಂಭವಾಗಿದ್ದು, ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ.