ಬೆಳ್ತಂಗಡಿ :ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಾಲಪಲ್ಕೆ ಕಲ್ಲರ್ಪೆ ರಸ್ತೆ ಬದಿ ಸುಮಾರು 50ಕ್ಕೂ ಹೆಚ್ಚು ಮೃತ ಹಾಗೂ ಅಸ್ವಸ್ಥ ಮಂಗಗಳು ನಿನ್ನೆ (ಗುರುವಾರ) ರಾತ್ರಿ ಪತ್ತೆಯಾಗಿವೆ.
ರಸ್ತೆ ಬದಿಯಲ್ಲಿದ್ದ ಮಂಗಗಳನ್ನು ನಿನ್ನೆ ರಾತ್ರಿ ವಾಹನದಲ್ಲಿ ಹೋಗುವವರು ಗಮನಿಸಿದ್ದಾರೆ. ಇಂದು ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾ.ಪಂ ಅಧ್ಯಕ್ಷ ಬಿ.ಕೆ. ಉದಯ ಕುಮಾರ್, ಪಿಡಿಒ ಮೋಹನ್ ಬಂಗೇರ, ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾ.ಪಂ ಸದಸ್ಯ ಹರೀಶ್ ಸೇರಿ ಇತರರು ಬಂದು ಪರಿಶೀಲಿಸಿದರು.