ಕಡಬ: ಸಮೀಪದ ಬಲ್ಯದ ಬಾಬ್ಲುಬೆಟ್ಟು ಎಂಬಲ್ಲಿ ಮಂಗಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂಬುವುದು ರೈತರ ಮನವಿಯಾಗಿದೆ.
ಮಂಗಗಳ ಹಾವಳಿ ಕೃಷಿಕರು ಕಂಗಾಲು.. - ಬಲ್ಯದ ಬಾಬ್ಲುಬೆಟ್ಟು ಬಿ.ಎಮ್. ಲಿಂಗಪ್ಪ ಗೌಡ ತೋಟ
ಕಡಬ ಸಮೀಪದ ಬಲ್ಯದ ಬಾಬ್ಲುಬೆಟ್ಟು ಎಂಬಲ್ಲಿ ಮಂಗಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಕೃಷಿ ಸ್ವತ್ತುಗಳಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರ ಮನವಿಯಾಗಿದೆ.
ಬಲ್ಯದ ಬಾಬ್ಲುಬೆಟ್ಟು ಬಿ ಎಮ್ ಲಿಂಗಪ್ಪಗೌಡ ಎಂಬುವರ ತೋಟ ಮತ್ತು ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುಮಾರು 100 ರಿಂದ 200 ಮಂಗಗಳು ಹಾವಳಿಯಿಡುತ್ತಿವೆ. ಇದರಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ.
ನಿರಂತರವಾಗಿ ಮಂಗಗಳು ದಾಳಿ ಮಾಡುತ್ತಿದ್ದು, ಅಪಾರ ಪ್ರಮಾಣದ ಸೀಯಾಳ, ಅಡಿಕೆ, ತರಕಾರಿ, ಬಾಳೆಕಾಯಿಗಳನ್ನು ನಾಶ ಮಾಡಿವೆ. ಯಾರೋ ಇವುಗಳನ್ನು ಬೇರೆ ಕಡೆಯಿಂದ ಹಿಡಿದು ತಂದು ಇಲ್ಲಿ ಬಿಟ್ಟದ್ದಾರೆ ಎಂಬುದಾಗಿ ಊರಿನವರು ಮಾತಾಡಿಕೊಳ್ಳುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳುವ ಮೂಲಕ ಕೃಷಿ ಸ್ವತ್ತುಗಳಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರ ಮನವಿಯಾಗಿದೆ.