ಮಂಗಳೂರು: ವಾರಸುದಾರರಿಲ್ಲದ ಲಕ್ಷಗಟ್ಟಲೆ ಹಣ ವ್ಯಕ್ತಿಯೊಬ್ಬರಿಗೆ ದೊರಕಿದೆ. ಆದರೆ ಅರ್ಧ ಗಂಟೆಯಲ್ಲಿ ಆ ಹಣ ಆತನ ಕೈತಪ್ಪಿದೆ. ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಬಾರ್ ಹೊರಗಡೆ ಶಿವರಾಜ್ ಎಂಬವರಿಗೆ ಹಣದ ಕಟ್ಟೊಂದು ಸಿಕ್ಕಿತ್ತು. ಇದರಲ್ಲಿ ಲಕ್ಷಗಟ್ಟಲೆ ಹಣ ಇತ್ತು ಎಂದು ಹಣ ದೊರೆತ ಶಿವರಾಜ್ ಎಂಬಾತ ಹೇಳಿಕೊಂಡಿದ್ದಾನೆ.
ಈ ಹಣ ಸಿಕ್ಕ ಸಂದರ್ಭದಲ್ಲಿ ಇದನ್ನು ಮತ್ತೊಬ್ಬ ವ್ಯಕ್ತಿ ನೋಡಿದ್ದರಿಂದ ಶಿವರಾಜ್ ಆತನಿಗೂ ಒಂದು ಕಟ್ಟನ್ನು ನೀಡಿದ್ದನಂತೆ. ಇದಾದ ಬಳಿಕ ಆತ ಬಾರ್ ನಲ್ಲಿ ಕುಡಿದಿದ್ದಾನೆ. ಅಲ್ಲಿಂದ ಹಣದೊಂದಿಗೆ ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದಾಗ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದು ಕಂಕನಾಡಿ ನಗರ ಠಾಣೆಯಲ್ಲಿ ಮೂರು ದಿನ ಇರಿಸಿದ್ದರು ಎನ್ನಲಾಗಿದ್ದು, ಆ ಬಳಿಕ ಶಿವರಾಜನನ್ನು ಬಿಟ್ಟು ಕಳುಹಿಸಿದ್ದಾರೆ.