ಕರ್ನಾಟಕ

karnataka

ETV Bharat / state

ಭ್ರಷ್ಟಾಚಾರ ಸಾಬೀತು ಪಡಿಸಲಿ, ಇಲ್ಲದಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇನೆ: ಮೋಹಿನಿ ವಿಶ್ವನಾಥ ಶೆಟ್ಟಿ - Venur grama panchayat

ಕಳೆದ ಕೆಲವು ಸಮಯಗಳ ಹಿಂದೆ ವೇಣೂರು ಗ್ರಾಮ ಪಂಚಾಯತ್ ನ ಸದಸ್ಯರುಗಳು, ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಅವಿಶ್ವಾಸ ನಿರ್ಣಯ ಕೈಗೊಂಡು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮೋಹಿನಿ, ಯಾರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೋ ಅವರು ನನ್ನ ಭ್ರಷ್ಟಾಚಾರವನ್ನು ಸಾಬೀತುಪಡಿಸಲಿ. ಇಲ್ಲದೇ ಹೋದರೆ, ನಾನು ಕೋರ್ಟ್ ಮೆಟ್ಟಿಲೇರಿ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

Mohini vishwanatha shetty
Mohini vishwanatha shetty

By

Published : Jun 19, 2020, 6:07 PM IST

ಬೆಳ್ತಂಗಡಿ:ಕಳೆದ ಕೆಲವು ದಿನಗಳ ಹಿಂದೆ ವೇಣೂರು ಗ್ರಾಮ ಪಂಚಾಯತ್ ನ ಸದಸ್ಯರುಗಳು, ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ, ಅವಿಶ್ವಾಸ ನಿರ್ಣಯ ಕೈಗೊಂಡು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಈ ಕುರಿತು ಮೋಹಿನಿ ವಿಶ್ವನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಇಂದು ತಾಲೂಕು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೋಹಿನಿ ವಿಶ್ವನಾಥ ಶೆಟ್ಟಿ, ನಾನು 2016ರಲ್ಲಿ ವೇಣೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಸ್ಥಾನ ತೆಗೆದುಕೊಂಡೆ. ನಂತರ ನನಗೆ ಗ್ರಾಮ ಪಂಚಾಯತ್ ಕಾನೂನುಗಳ ಅನುಭವ ಇಲ್ಲವೆಂದು ಉಪಾಧ್ಯಕ್ಷ ಅರುಣ್ ಕ್ರಾಸ್ತ ಹಾಗೂ ಸದಸ್ಯರಾದ ಲೋಕಯ್ಯ ಪೂಜಾರಿ, ರಾಜೇಶ್ ಮೂಡುಕೋಡಿ ಸೇರಿದಂತೆ ಗ್ರಾಮ ಪಂಚಾಯತ್ ನ ಇತರೆ ಬಿಜೆಪಿ ಸದಸ್ಯರುಗಳು ನನಗೆ ಒತ್ತಡ ಹಾಕಿ ವೇಣೂರು ಗ್ರಾಮ ಪಂಚಾಯತ್​ಗಳಲ್ಲಾದ ಕಾಮಗಾರಿಗಳ ಬಿಲ್ಲಿಗೆ ನನ್ನಿಂದ ಸಹಿ ಹಾಕಿಸಿ ಹಣ ಡ್ರಾ ಮಾಡುತ್ತಿದ್ದರು. ನಾನು ಮಹಿಳೆಯಾದುದರಿಂದ, ಅಲ್ಲದೇ ಹೆಚ್ಚು ಅನುಭವ ಇಲ್ಲದ ಕಾರಣ ಸಹಿ ಹಾಕುತ್ತಿದ್ದೆ ಎಂದರು.

ಅದರೆ, ಸ್ವಲ್ಪ ಸಮಯದ ನಂತರ ಸರಿಯಾಗಿ ಬಿಲ್ ಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡ ಬಳಿಕವೇ ಸಹಿ ಮಾಡುತ್ತಿದ್ದೆ. ಈ ಬಗ್ಗೆ ತಕರಾರು ಎತ್ತುತ್ತಿದ್ದ ಸದಸ್ಯರು, ನಮ್ಮ ಮೇಲೆ ನಿಮಗೆ ವಿಶ್ವಾಸ ಇಲ್ಲವೇ, ನಾವು ಹೇಳಿದ ಮತ್ತು ನಾವು ಮಾಡಿದ ಕಾಮಗಾರಿ ಬಿಲ್ಲುಗಳಿಗೆ ಮಾತ್ರ ಸಹಿ ಮಾಡಬೇಕು. ನಮ್ಮ ಒಪ್ಪಿಗೆ ಇಲ್ಲದೇ ಯಾವುದಕ್ಕೂ ಸಹಿ ಹಾಕಬಾರದು ಎಂದು ತಿಳಿಸಿದರು. ಅಷ್ಟೇ ಅಲ್ಲದೇ, ನಾವು ಹೇಳಿದ ಬಿಲ್ಲುಗಳಿಗೆ ಸಹಿ ಮಾಡದೇ ಹೋದಲ್ಲಿ ಅಧ್ಯಕ್ಷ ಸ್ಥಾನದಿಂದ ಇಳಿಸುತ್ತೇವೆ ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದರು. ಆದ್ರೆ ನಾನು ಎಲ್ಲವನ್ನೂ ಸಹಿಸಿಕೊಂಡು ಪಕ್ಷದ ಹಿತದೃಷ್ಟಿಯಿಂದ ಸುಮ್ಮನಿರುತ್ತಿದ್ದೆ.

ಇತ್ತೀಚೆಗೆ ಅರುಣ್ ಕ್ರಾಸ್ತ, ದೀಕ್ಷಿತ್ ಎಂಬುವರ ಹೆಸರಲ್ಲಿ ಕಾಮಗಾರಿ ಮಾಡಿ ಸಹಿ ಹಾಕುವಂತೆ ಒತ್ತಡ ಹಾಕಿದರು. ಅದರೆ ನಾನು ಕಾಮಗಾರಿ ಪರಿಶೀಲಿಸಿ ಸಹಿ ಮಾಡುತ್ತೇನೆ ಎಂದಾಗ ನನಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ನಂತರ ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು ನೀವು ಸದಸ್ಯರು ಹೇಳಿದ ಹಾಗೆ ಕೇಳದಿದ್ದರೆ ಅಧ್ಯಕ್ಷ ಸ್ಥಾನದಿಂದ ಹೇಗೆ ಇಳಿಸಬೇಕೆಂದು ಗೊತ್ತು ಎಂದು ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಸಿದ್ದರು ಎಂದು ಆರೋಪಿಸಿದರು.

ಈ ಬಗ್ಗೆ ವೇಣೂರು ಠಾಣೆಯಲ್ಲಿ ಇವರ ವಿರುದ್ಧ ಕೇಸ್ ದಾಖಲಿಸುವಂತೆ ದೂರು ಸಲ್ಲಿಸಿದೆ. ಅದರೆ ಕೆಲವು ಬಿಜೆಪಿ ನಾಯಕರು ಕೇಸ್ ನೀಡದಂತೆ ರಾಜಿ ಸಂಧಾನ ಮೂಲಕ ಸಮಸ್ಯೆಯನ್ನು ಇತ್ಯರ್ಥಗೊಳಿಸಿದರು ಎಂದು ಮೋಹಿನಿ ಆರೋಪಿಸಿದರು. ಅವರೆಲ್ಲಾ ಹೇಳಿದ ಹಾಗೆ ನಾನು ಕೇಳುವುದಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಲವರು ಮೊಬೈಲ್ ನಲ್ಲಿ ಇಲ್ಲ-ಸಲ್ಲದ ಮೆಸೇಜ್ ಗಳನ್ನು ಬರೆದು ಪ್ರಚಾರ ಮಾಡುತ್ತಿದ್ದಾರೆ. ಅದಲ್ಲದೇ ಪತ್ರಿಕೆಗಳಲ್ಲೂ ಹೇಳಿಕೆ ಕೊಟ್ಟಿರುತ್ತಾರೆ. ಇದರಿಂದ ನನಗೆ ಮಾನಸಿಕವಾಗಿ ಹಿಂಸೆಯಾಗಿದ್ದು, ಇನ್ನು ನಾನು ಸುಮ್ಮನೆ ಕೂರುವುದಿಲ್ಲವೆಂದು ಅಸಮಾಧಾನ ಮೋಹಿನಿ ವಿಶ್ವನಾಥ್​ ಶೆಟ್ಟಿ ಹೊರಹಾಕಿದರು.

ಯಾರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೋ ಅವರು ನನ್ನ ಭ್ರಷ್ಟಾಚಾರವನ್ನು ಸಾಬೀತುಪಡಿಸಲಿ. ಇಲ್ಲದೇ ಹೋದರೆ, ನಾನು ಕೋರ್ಟ್ ಮೆಟ್ಟಿಲೇರಿ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಭಾಕರ ಹೆಗ್ಡೆ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ABOUT THE AUTHOR

...view details