ಕರ್ನಾಟಕ

karnataka

ETV Bharat / state

ಕೋವಿಡ್ ಮುಂಜಾಗ್ರತೆಗೆ ಮಂಗಳೂರಿನಲ್ಲಿ‌ ಮಾದರಿಯಾದ ಪೊಲೀಸ್ ಠಾಣೆ - ​ ಮಾದರಿ ಕೋವಿಡ್ ಪೊಲೀಸ್​ ಠಾಣೆ

ಮಂಗಳೂರಿನ ಹಲವೆಡೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದ ಉರ್ವ ಪೊಲೀಸ್ ಠಾಣೆಯನ್ನು ಮಾದರಿ ಕೋವಿಡ್ ಠಾಣೆಯನ್ನಾಗಿ ಪರಿವರ್ತಿಸಲಾಗಿದೆ.

police station
ಮಂಗಳೂರಿನಲ್ಲಿ‌ ಮಾದರಿಯಾದ ಪೊಲೀಸ್ ಠಾಣೆ

By

Published : Apr 17, 2021, 10:24 PM IST

ಮಂಗಳೂರು:ಕೋವಿಡ್ ವಾರಿಯರ್​ಗಳಾಗಿ ಮುಂಚೂಣಿಯಲ್ಲಿರುವ ಪೊಲೀಸ್‌ ಇಲಾಖೆ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು. ಇದೀಗ ಎಲ್ಲೆಡೆ ಎರಡನೇ ಅಲೆಯ ಭೀತಿಯಿದ್ದು,‌ ಸೋಂಕು ಹರಡದಂತೆ, ಪೊಲೀಸರ ಆರೋಗ್ಯ ರಕ್ಷಣೆಗಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಯನ್ನು ಮಾದರಿ ಕೋವಿಡ್ ಠಾಣೆಯಾಗಿ ಮಾಡಲಾಗಿದೆ.

ಮಂಗಳೂರಿನಲ್ಲಿ‌ ಮಾದರಿಯಾದ ಪೊಲೀಸ್ ಠಾಣೆ

ಪೊಲೀಸ್ ಠಾಣೆಗೆ ದಿನನಿತ್ಯವೂ ದೂರು ನೀಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿರುತ್ತಾರೆ. ಆದ್ದರಿಂದ ಪೊಲೀಸರ ಆರೋಗ್ಯ ರಕ್ಷಣೆ ಹಾಗೂ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಯ ಹೊರಗಡೆಯೇ ಘಟಕವೊಂದನ್ನು ತೆರೆಯಲಾಗಿದೆ. ಇಲ್ಲಿ ಯುವಿ ಸ್ಕ್ಯಾನರ್ ಅಳವಡಿಸಲಾಗಿದ್ದು, ಈ ಮೂಲಕ ದೂರುದಾರರು ತಂದಿರುವ ದೂರು ಪ್ರತಿ, ಇನ್ನಿತರ ದಾಖಲೆ ಪತ್ರಗಳನ್ನು ಸ್ಕ್ಯಾನಿಂಗ್ ಯಂತ್ರದೊಳಗೆ ಒಂದು ನಿಮಿಷ ಇಟ್ಟು ಸ್ಯಾನಿಟೈಸರ್ ಮಾಡಲಾಗುತ್ತದೆ. ಇದರಿಂದ ಕಾಗದ ಪತ್ರಗಳಲ್ಲಿ ಸೋಂಕುಗಳೇನಾದರು ಇದ್ದಲ್ಲಿ ಅಲ್ಟ್ರಾ ವೈಲಟ್ ಸ್ಕ್ಯಾನರ್ ಮೂಲಕ ನಾಶಪಡಿಸುವ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೆ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ದೂರುದಾರರು ಅಥವಾ ಫಿರ್ಯಾದಿದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಾಥಮಿಕ ಮಾಹಿತಿಯನ್ನು ಹೊರಗಡೆಯೇ ಪಡೆದುಕೊಂಡು ಬಂದವರಿಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ ಎಂದಲ್ಲಿ ಅವರನ್ನು ಠಾಣೆಯ ಒಳಗಡೆ ಅಧಿಕಾರಿಗಳಲ್ಲಿಗೆ ಕಳುಹಿಸಲಾಗುತ್ತದೆ. ಈ ತಪಾಸಣೆಯನ್ನು ಮಾಡುವ ಪೊಲೀಸ್ ಸಿಬ್ಬಂದಿಯು ಮಾಸ್ಕ್, ಗ್ಲೌಸ್ ಧರಿಸಿ ಬರುವ ದೂರುದಾರರೊಂದಿಗೆ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪೊಲೀಸ್ ಆರೋಗ್ಯ ಹಿತದೃಷ್ಟಿಯಿಂದ ಕರಿಮೆಣಸು, ಲವಂಗ, ಚೆಕ್ಕೆ ಇನ್ನಿತರ ಸಾಮಗ್ರಿಗಳನ್ನು ಸೇರಿಸಿ ಕಷಾಯ ನೀಡಲಾಗುತ್ತದೆ. ಈ ಮೂಲಕ ಉರ್ವ ಪೊಲೀಸ್ ಠಾಣೆಯನ್ನು ಮಾದರಿ ಕೋವಿಡ್ ಠಾಣೆಯಾಗಿ ಮಾಡಲಾಗಿದೆ.

ಈ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನವೂ ಹೆಚ್ಚಳ ಕಂಡುಬರುತ್ತಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಗ್ಯ ಹಿತದೃಷ್ಟಿಯಿಂದ ಉರ್ವ ಪೊಲೀಸ್ ಠಾಣೆಯನ್ನು ಮಾದರಿ ಠಾಣೆಯನ್ನಾಗಿ ಪರಿವರ್ತಿಸಲಾಗಿದೆ. ಈ ಮೂಲಕ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

ABOUT THE AUTHOR

...view details