ಮಂಗಳೂರು :ನಗರದ ಎಂಆರ್ಪಿಲ್ ನ ಕಚ್ಚಾತೈಲ ಶುದ್ಧೀಕರಣ ಘಟಕದಲ್ಲಿ ಎಲ್ಪಿಜಿ ಸೋರಿಕೆಯಾದಲ್ಲಿ ಯಾವ ರೀತಿ ತುರ್ತು ಕಾರ್ಯಾಚರಣೆ ನಡೆಸಲಾಗುತ್ತದೆ ಎಂಬ ಅಣಕು ಪ್ರದರ್ಶನ ಇಂದು ನಡೆಯಿತು.
ಎಂಆರ್ಪಿಲ್ ನ ಕಚ್ಚಾತೈಲ ಶುದ್ಧೀಕರಣ ಘಟಕದಲ್ಲಿ ಅಣಕು ಪ್ರದರ್ಶನ - Mock show in MRPL crude oil refinery
ಈ ಅಣಕು ಪ್ರದರ್ಶನದಿಂದ ತುರ್ತುಸ್ಥಿತಿಯ ಸಂದರ್ಭದಲ್ಲಿ ಕೈಗಾರಿಕೆಗಳು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ತಿಳಿಯಬಹುದಾಗಿದೆ. ಹಾಗೂ ಇದರ ಅಂದಾಜು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ದೊರೆಯಲಿದೆ..

ಎಂಆರ್ಪಿಲ್ ನ ಕಚ್ಚಾತೈಲ ಶುದ್ಧೀಕರಣ ಘಟಕದಲ್ಲಿ ಅಣಕು ಪ್ರದರ್ಶನ
ಈ ಅಣಕು ಪ್ರದರ್ಶನದಿಂದ ತುರ್ತುಸ್ಥಿತಿಯ ಸಂದರ್ಭದಲ್ಲಿ ಕೈಗಾರಿಕೆಗಳು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ತಿಳಿಯಬಹುದಾಗಿದೆ. ಹಾಗೂ ಇದರ ಅಂದಾಜು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ದೊರೆಯಲಿದೆ. ಅಣಕು ಕಾರ್ಯಾಚರಣೆಯಲ್ಲಿ ಎಂಆರ್ಪಿಎಲ್ ಅಗ್ನಿಶಾಮಕ ವಿಭಾಗ, ಎಂಆರ್ಪಿಎಲ್ ಕಾರ್ಯಾಚರಣೆ ಹಾಗೂ ನಿರ್ವಹಣಾ ವಿಭಾಗ ಪಾಲ್ಗೊಂಡಿತ್ತು.
ಈ ಸಂದರ್ಭದಲ್ಲಿ ದ. ಕ. ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಉಪಸ್ಥಿತರಿದ್ದು, ಅಣಕು ಪ್ರದರ್ಶನವನ್ನು ವೀಕ್ಷಿಸಿದರು.