ಮಂಗಳೂರು: ಉಳ್ಳಾಲದಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆ ಶಾಸಕ ಯು.ಟಿ. ಖಾದರ್ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಉಳ್ಳಾಲದಲ್ಲಿ ಕೊರೊನಾ ಸಂಕಟ: ಶಾಸಕ ಖಾದರ್ ವೆನ್ಲಾಕ್ ಆಸ್ಪತ್ರೆಗೆ ಭೇಟಿ, ಪರಿಶೀಲನೆ - Wenlock Hospital
ಉಳ್ಳಾಲದಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆ ಶಾಸಕ ಯು.ಟಿ.ಖಾದರ್ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಖಾದರ್ ವೆನ್ಲಾಕ್ ಆಸ್ಪತ್ರೆಗೆ ಭೇಟಿ,ಪರಿಶೀಲನೆ
ಈ ಸಂದರ್ಭ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಅಧೀಕ್ಷಕ ಡಾ. ಸದಾಶಿವ ಚರ್ಚೆ ನಡೆಸಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆಹಾರ, ಚಿಕಿತ್ಸಾ ಕ್ರಮ, ಮುನ್ನೆಚ್ಚರಿಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೋವಿಡ್ ಸೋಂಕಿತ ಮಕ್ಕಳ ಬಗ್ಗೆ ಆಸ್ಪತ್ರೆಯಲ್ಲಿ ವಿಶೇಷ ನಿಗಾವಹಿಸುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ಹುಟ್ಟಿದ ಮಗುವಿನ ಗಂಟಲು ದ್ರವ ತಪಾಸಣೆಯನ್ನು ಶೀಘ್ರ ನಡೆಸುವಂತೆ ಪೋಷಕರ ಒತ್ತಾಯದ ಮೇರೆಗೆ ವಿನಂತಿ ಮಾಡಿದರು. ಆದರೆ ಏಳು ದಿನದ ಬಳಿಕವೇ ಮಗುವಿನ ತಪಾಸಣೆ ಮಾಡಲಾಗುತ್ತದೆ ಎಂದು ವೈದ್ಯಾಧಿಕಾರಿ ಅವರು ಶಾಸಕರಿಗೆ ತಿಳಿಸಿದ್ದಾರೆ.