ಮಂಗಳೂರು:ಕರ್ನಾಟಕ ಮತ್ತು ತಮಿಳುನಾಡು ಸಂಪರ್ಕಿಸುವ ಕೇರಳದ ಅಂತರ್ ರಾಜ್ಯ ಗಡಿಯನ್ನು ಮುಚ್ಚಲು ಆದೇಶಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ನಡೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕಿಡಿಕಾರಿದ್ದು, ಇದು ಪಿಣರಾಯಿ ವಿಜಯನ್ ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಗಡಿ ಮುಚ್ಚಲು ಆದೇಶಿಸಿರುವ ಪಿಣರಾಯಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ: ವೇದವ್ಯಾಸ ಕಾಮತ್ ವಾಗ್ದಾಳಿ
ಕರ್ನಾಟಕ ಮತ್ತು ತಮಿಳುನಾಡಿನ ಅಂತರ್ ರಾಜ್ಯ ಗಡಿಯನ್ನು ಮುಚ್ಚಲು ಆದೇಶಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ನಡೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು ಹಿಂದೆ ತಲಪಾಡಿಯಲ್ಲಿ ಕಾಸರಗೋಡು ಗಡಿಯನ್ನು ಬಂದ್ ಮಾಡಿದಾಗ ಸುಪ್ರೀಂ ಕೋರ್ಟ್ ಬಾಗಿಲು ಬಡಿದಿರುವ ಪಿಣರಾಯಿ, ಇದೀಗ ತಾವೇ ಗಡಿ ಮುಚ್ಚಲು ಆದೇಶ ನೀಡಿದ್ದಾರೆ ಎಂದು ಟೀಕಿಸಿದ್ದಾರೆ. ಕೇರಳ ಗಡಿ ಭಾಗದಿಂದ ಕೋವಿಡ್ ಸೋಂಕಿತರು ನೆರೆಯ ದ.ಕ. ಜಿಲ್ಲೆ ಪ್ರವೇಶಿಸದಂತೆ ದ.ಕ. ಜಿಲ್ಲಾಡಳಿತ ಕೇರಳ - ಕಾಸರಗೋಡು ಗಡಿಯನ್ನು ತಲಪಾಡಿಯಲ್ಲಿ ಮುಚ್ಚಿತ್ತು. ಇದನ್ನು ಪ್ರಶ್ನಿಸಿ, ಕೇರಳ ಸಿಎಂ ಪಿಣರಾಯಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಇದೀಗ ಅವರೇ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಗಡಿಯನ್ನು ಮುಚ್ಚಲು ಆದೇಶಿಸಿರುವುದು ಟೀಕೆಗೆ ಒಳಗಾಗಿದೆ.