ಮಂಗಳೂರು:ನಗರದ ಉಳ್ಳಾಲ ವಿಧಾನಸಭಾ ವ್ಯಾಪ್ತಿಯ 1,050 ಮಂದಿ ಪ್ರವಾಹ ಸಂತ್ರಸ್ತರಿಗೆ ಶಾಸಕ ಯು.ಟಿ. ಖಾದರ್ ತೊಕ್ಕೊಟ್ಟು ಯುನಿಟಿ ಹಾಲ್ನಲ್ಲಿ ಪರಿಹಾರ ಚೆಕ್ ವಿತರಿಸಿದರು.
ಉಳ್ಳಾಲ ವಿಧಾನಸಭಾ ವ್ಯಾಪ್ತಿಯ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಖಾದರ್ - ರಾಜ್ಯ ಸರ್ಕಾರದ ನೆರೆ ಪರಿಹಾರದ ಯೋಜನೆ
ಮಂಗಳೂರಿನ ಉಳ್ಳಾಲ ವಿಧಾನಸಭಾ ವ್ಯಾಪ್ತಿಯ ನೆರೆ ಸಂತ್ರಸ್ತ ಕುಟುಂಬಗಳಿಗೆ ಶಾಸಕ ಯು.ಟಿ. ಖಾದರ್ ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಿದರು.
ಪರಿಹಾರದ ಚೆಕ್ ವಿತರಿಸಿದ ಶಾಸಕ ಖಾದರ್
ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಭಾಗಶಃ ಹಾನಿ ಹಾಗೂ ಸೊತ್ತು ನಾಶವಾಗಿರುವ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರದ ನೆಲೆಯಲ್ಲಿ ತಲಾ 10 ಸಾವಿರ ರೂ. ಪರಿಹಾರ ಚೆಕ್ ಅನ್ನು ವಿತರಿಸಲಾಯಿತು.
ರಾಜ್ಯ ಸರ್ಕಾರದ ನೆರೆ ಪರಿಹಾರದ ಯೋಜನೆಯ ಮೂಲಕ ಈ ಪರಿಹಾರ ಚೆಕ್ನನ್ನು ವಿತರಿಸಲಾಗಿದ್ದು, 1,050 ಮಂದಿ ಸಂತ್ರಸ್ತರು ಈ ಯೋಜನೆಯ ಫಲಾನುಭವ ಪಡೆದರು. ಈ ಸಂದರ್ಭ ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಗ್ರಾಮ ಲೆಕ್ಕಿಗರು, ಗಾ.ಪಂ. ಅಧಿಕಾರಿಗಳು ಉಪಸ್ಥಿತರಿದ್ದರು.