ಬಂಟ್ವಾಳ(ದಕ್ಷಿಣಕನ್ನಡ):ನಗರದ ಫರಂಗಿಪೇಟೆಯಲ್ಲಿ ಐದು ಗ್ರಾಮಗಳ ಟೈಲರ್ಗಳಿಗೆ ಶಾಸಕ ಯು.ಟಿ. ಖಾದರ್ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಐದು ಗ್ರಾಮಗಳ ಟೈಲರ್ಗಳಿಗೆ ವೈಯಕ್ತಿಕವಾಗಿ ಆಹಾರದ ಕಿಟ್ ವಿತರಿಸಿದ ಖಾದರ್ - ಬಂಟ್ವಾಳ ತಾಲೂಕಿನ ಫರಂಗಿಪೇಟೆ
ಶಾಸಕ ಯು.ಟಿ. ಖಾದರ್ ಅವರು ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಭಾ ಭವನದಲ್ಲಿ ಐದು ಗ್ರಾಮಗಳ ಟೈಲರ್ಗಳಿಗೆ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಐದು ಗ್ರಾಮಗಳ ಟೈಲರ್ಗಳಿಗೆ ವೈಯಕ್ತಿಕವಾಗಿ ಆಹಾರದ ಕಿಟ್ ವಿತರಿಸಿದ ಖಾದರ್
ತಮ್ಮ ವೈಯಕ್ತಿಕ ಖರ್ಚಿನಲ್ಲಿ ಪುದು, ತುಂಬೆ, ಕಳ್ಳಿಗೆ, ಮೇರಮಜಲು, ಕೊಡ್ಮಾನ್ ಗ್ರಾಮಗಳ ಟೈಲರ್ಗಳಿಗೆ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಭಾ ಭವನದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿದ್ರು.
ಬಳಿಕ ಮಾತನಾಡಿದ ಅವರು, ಲಾಕ್ಡೌನ್ನಿಂದ ಕಾರ್ಮಿಕರು, ಶ್ರಮ ಜೀವಿಗಳು, ಬಡ-ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಈ ಕಾಲಘಟ್ಟಗಳಲ್ಲಿ ನಾವು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದರು.