ಮಂಗಳೂರು: ಲಾಕ್ಡೌನ್ ಕಾರಣ ಶಾಸಕ ಯು.ಟಿ.ಖಾದರ್ ಮನೆಯಲ್ಲೇ ಸರಳವಾಗಿ ಈದ್ ನಮಾಜ್ ನೆರವೇರಿಸಿದರು.
ಲಾಕ್ಡೌನ್ ಹಿನ್ನೆಲೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲು ಅನುಮತಿ ಇಲ್ಲ. ಹೀಗಾಗಿ, ಶಾಸಕ ಖಾದರ್, ಕುಟುಂಬ ಸದಸ್ಯರೊಂದಿಗೆ ಮನೆಯಲ್ಲೇ ಪ್ರಾರ್ಥನೆ ನೆರವೇರಿಸಿದರು.

ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಳ ಈದುಲ್ ಫಿತ್ರ್ ಆಚರಣೆ
ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಹಬ್ಬದ ಹಿಂದಿರುವ ಸಂದೇಶ ತಾಳ್ಮೆ, ಪ್ರೀತಿ, ಸಹೋದರತೆಯಾಗಿರುತ್ತದೆ. ಅಂತಹ ಸ್ನೇಹ- ಸೌಹಾರ್ದತೆಯ ದ್ಯೋತಕವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತದೆ ಎಂದರು. ಈ ಬಾರಿ ಕೋವಿಡ್ ಲಾಕ್ಡೌನ್ ಇರುವುರಿಂದ ಯಾರೂ ಅನಗತ್ಯವಾಗಿ ಓಡಾಡದೆ ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸಿ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೋಂಕು ನಿಯಂತ್ರಣಕ್ಕೆ ಸಹಕರಿಸಿ ಎಂದು ಜನರಿಗೆ ಕರೆ ನೀಡಿದರು.