ಬಂಟ್ವಾಳ:ತಿಂಗಳ ಹಿಂದೆ ದುಷ್ಕರ್ಮಿಗಳಿಂದ ದೌರ್ಜನ್ಯಕ್ಕೊಳಗಾದ ವಿಟ್ಲ ಕುಡ್ತಮುಗೇರಿನ ಬಾಲಕನ ಮನೆಗೆ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಧೈರ್ಯ ತುಂಬಿದರು.
ದೌರ್ಜನ್ಯಕ್ಕೊಳಗಾದ ಬಾಲಕನಿಗೆ ಧೈರ್ಯ ತುಂಬಿದ ಶಾಸಕ ಖಾದರ್ - ಶಾಸಕ ಯು.ಟಿ.ಖಾದರ್
ಒಂದು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ದೌರ್ಜನ್ಯಕ್ಕೊಳಗಾದ ಬಾಲಕನ ಮನೆಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಧೈರ್ಯ ತುಂಬಿದರು.
Batkala news
ಘಟನೆಯ ವಿವರ ತಿಳಿದ ತಕ್ಷಣ ಪೊಲೀಸ್ ಉನ್ನತಾಧಿಕಾರಿಗಳ ಜೊತೆ ಮಾತನಾಡಿ ಆರೋಪಿಗಳನ್ನು ಬಂಧಿಸಿ ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದೇನೆ. ಬಾಲಕನ ಕುಟುಂಬವು ಯಾವುದೇ ಆತಂಕಕ್ಕೊಳಗಾಗಬಾರದು. ಘಟನೆಯ ಬಗ್ಗೆ ಧರ್ಮದ ಲೇಪನ ಹಚ್ಚದೆ ಶಾಂತಿ ಕಾಪಾಡುವಂತೆ ವಿನಂತಿಸಿದರು.
ಎಲ್ಲಾ ಧರ್ಮಗಳಲ್ಲಿರುವ ಬೆರಳೆಣಿಕೆಯ ಕೆಲವರಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದ್ದು, ಪೊಲೀಸ್ ಇಲಾಖೆ ನಿಷ್ಪಕ್ಷಪಾತದಿಂದ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವಂತೆ ಆಗ್ರಹಿಸಿದರು.