ಕರ್ನಾಟಕ

karnataka

ETV Bharat / state

ಶಿಕ್ಷಣದ ಬಗ್ಗೆ ದಿನಕ್ಕೊಂದು ಹೇಳಿಕೆ, ಇದು ಆಡಳಿತ ವೈಫಲ್ಯ ತೋರಿಸುತ್ತಿದೆ : ಖಾದರ್ ಕಿಡಿ - latest news of khadar

ಸರ್ಕಾರದಿಂದ ದಿನಕ್ಕೊಂದು ಹೇಳಿಕೆ ಬರುತ್ತಿದ್ದು, ವಿದ್ಯಾರ್ಥಿಗಳು, ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪರೀಕ್ಷೆ, ಆನ್​ಲೈನ್ ತರಗತಿಗಳ ಬಗ್ಗೆ ನಂತರ ಯೋಚನೆ ಮಾಡಿದರಾಯಿತು. ಮೊದಲು ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

MLA U. T. Khadar
ಶಾಸಕ ಯು.ಟಿ. ಖಾದರ್

By

Published : Jun 13, 2020, 12:56 PM IST

ಮಂಗಳೂರು : ರಾಜ್ಯ ಸರ್ಕಾರದ ಬಳಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸ್ಪಷ್ಟತೆ ಇಲ್ಲ, ಗೊಂದಲದ ಹೇಳಿಕೆ ನೀಡುತ್ತಿದೆ. ಇದು ಸರ್ಕಾರದ ಆಡಳಿತ ವೈಫಲ್ಯತೆ ತೋರಿಸುತ್ತಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ದಿನಕ್ಕೊಂದು ಹೇಳಿಕೆಯಿಂದ ವಿದ್ಯಾರ್ಥಿಗಳು, ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪರೀಕ್ಷೆ, ಆನ್​ಲೈನ್ ತರಗತಿಗಳ ಬಗ್ಗೆ ನಂತರ ಯೋಚನೆ ಮಾಡಿದರಾಯಿತು. ಮೊದಲು ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದರು.

ಕಳೆದ ಎರಡು ತಿಂಗಳಿನಿಂದ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ‌. ಯಾವುದೇ ಹೇಳಿಕೆ ನೀಡಿದರೂ ಬಹಿರಂಗವಾಗಿ ಹೇಳುವುದಿಲ್ಲ, ಸ್ಪಷ್ಟತೆ ಇಲ್ಲ. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ, ಜನರಲ್ಲಿ ಯಾಕೆ ಗೊಂದಲ ಸೃಷ್ಟಿ ಮಾಡುತ್ತಿದ್ದೀರಾ. ಸರ್ಕಾರ ಪರೀಕ್ಷೆ ನಡೆಯುವ ಕನಿಷ್ಠ 50 ಮೀಟರ್ ಒಳಗಡೆ ಯಾರೂ ಒಳಗಡೆ ಹೋಗದಂತೆ ಲಾಕ್​ಡೌನ್ ಮಾಡಲಿ.‌ ಅಲ್ಲದೇ ಪರೀಕ್ಷೆ ನಡೆಯುವ ಕೋಣೆಗಳಿಗೆ ಔಷಧ ಸಿಂಪಡಿಸುವಂತೆ ಪಂಚಾಯತ್​ಗಳಿಗೆ ಹೇಳಿದ್ದಾರೆ‌. ಅವರಿಗೆ ಆ ಬಗ್ಗೆ ಅರಿವಿದೆಯೇ ಅಥವಾ ಅವರಲ್ಲಿ ಅದಕ್ಕೆ ಬೇಕಾಗುವ ಸಾಮಗ್ರಿಗಳಿವೆಯೇ ? ಎಂದು ಪ್ರಶ್ನಿಸಿದ ಅವರು ಈ ಕೆಲಸವನ್ನು ಆರೋಗ್ಯ ಇಲಾಖೆ ನಿಭಾಯಿಸಲಿ ಎಂದು ಖಾದರ್ ಸಲಹೆ ನೀಡಿದರು.

ಶಾಸಕ ಯು.ಟಿ. ಖಾದರ್

ಪರೀಕ್ಷೆಯ ದಿನಾಂಕ ನಿಗದಿಪಡಿಸಲು ಸಾಕಷ್ಟು ಗೊಂದಲ ಸೃಷ್ಟಿಯಾಯಿತು. ಈಗ ಪರೀಕ್ಷೆ ದಿನಾಂಕ ನಿಗದಿಯಾದ ಬಳಿಕ ಯಾವುದೇ ತೊಂದರೆಯಾಗದ ರೀತಿ, ವಿದ್ಯಾರ್ಥಿಗಳು ಧೈರ್ಯದಿಂದ ಬಂದು ಪರೀಕ್ಷೆ ಬರೆಯುವ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರದ ಜವಾಬ್ದಾರಿ. ಅದರ ನಡುವೆ ಆನ್​ಲೈನ್ ತರಗತಿಯ ಚರ್ಚೆ ಬೇಡ ಎಂದು ಕಿವಿ ಮಾತು ಹೇಳಿದರು.

5ನೇ ತರಗತಿವರೆಗೆ ಆನ್​ಲೈನ್ ತರಗತಿ ಇಲ್ಲದಿದ್ದರೆ ಅದನ್ನು ಸ್ವಾಗತಿಸುತ್ತೇನೆ. ಆನ್​ಲೈನ್​ ತರಗತಿಯ ಅಗತ್ಯವೇ ಇಲ್ಲ. 5 ನೇ ತರಗತಿವರೆಗೆ ಆನ್​ಲೈನ್ ತರಗತಿ ಬೇಡ ಎನ್ನುವ ಸರಕಾರ ಬೈಜು ಮತ್ತಿತರ ಖಾಸಗಿ ಎಜುಕೇಷನ್‌ ಆ್ಯಪ್​ಗಳಿಗೆ ಅವಕಾಶ ನೀಡುತ್ತಿದೆ. ಮೊದಲು ಈ ರೀತಿಯ ಆ್ಯಪ್ ಗಳ ಬಗ್ಗೆ ಕ್ರಮ ವಹಿಸಿ ನಿಷೇಧ ಮಾಡಲಿ ಎಂದರು.

ಬರುವ ವರ್ಷದ ಪಠ್ಯಕ್ರಮ ಇನ್ನೂ ನಿಗದಿಯಾಗಿಲ್ಲ. ಎಷ್ಟು ತಿಂಗಳುಗಳ ಕಾಲ ತರಗತಿ ನಡೆಸಬಹುದು ಎಂಬ ಚಿಂತನೆ ಕೂಡ ಸರ್ಕಾರಕ್ಕಿಲ್ಲ. ಅದಕ್ಕೆ ಅನುಗುಣವಾಗಿ ಪಠ್ಯಪುಸ್ತಕ ರಚಿಸಿ, ಶಾಲೆಗಳಿಗೆ ಪೂರೈಕೆ ಮಾಡಿದಲ್ಲಿ ಮಕ್ಕಳು ಮನೆಗೆ ಕೊಂಡೊಯ್ದು ಅಧ್ಯಯನ ನಡೆಸಬಹುದು‌. ಈ ರೀತಿಯ ಚಿಂತನೆ ಯಾಕೆ ಸರ್ಕಾರ ಮಾಡುತ್ತಿಲ್ಲ. ಈ ನಡುವೆ ಸರ್ಕಾರ ಫೀಸ್ ಕಟ್ಟಬೇಡಿ ಎಂದು ಹೇಳುತ್ತಿದೆ‌. ಇದರಿಂದ ಶಾಲಾ ಆಡಳಿತ ಮಂಡಳಿ‌ ಶಿಕ್ಷಕರಿಗೆ ಸರಿಯಾಗಿ ಸಂಬಳ ಕೊಡಲು‌ ಸಾಧ್ಯವಾಗುತ್ತಿಲ್ಲ. ಈ ಗೊಂದಲದ ಹೇಳಿಕೆಯಿಂದ ಎಷ್ಟೋ ಶಿಕ್ಷಕರು ಇಂದು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಶಾಲಾ ಆಡಳಿತ ಮಂಡಳಿಗೆ ಮುಂದಿನ ಮಾರ್ಚ್ ಅಂತ್ಯದವರೆಗೆ ಬಡ್ಡಿ ರಹಿತ ಸಾಲ ನೀಡಲಿ ಎಂದು ಖಾದರ್ ಸಲಹೆ ನೀಡಿದರು.

ABOUT THE AUTHOR

...view details