ಕರ್ನಾಟಕ

karnataka

ETV Bharat / state

ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳು ಬಡರೋಗಿಗಳ ಆಶಾಕಿರಣ : ಸಂಜೀವ ಮಠಂದೂರು - Puttur MLA Sanjeeva Matandoor

ಅತೀ ಅಗತ್ಯ, ಪ್ರಸಕ್ತ ಸಂದರ್ಭದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆಯು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಗತಿ ಆಸ್ಪತ್ರೆಯು ಪುತ್ತೂರಿನ ಜನರಿಗೆ ಹೊಸ ಸೌಲಭ್ಯ ನೀಡಿದೆ. ತೀವ್ರ ನಿಗಾ ವ್ಯವಸ್ಥೆ ಇರುವ ಆ್ಯಂಬುಲೆನ್ಸ್ ಸೇವೆಯನ್ನು ಮಂಗಳೂರು ಕೆಎಂಸಿಯ ಸಹಯೋಗದಲ್ಲಿ ಆರಂಭಿಸಿದೆ..

mla sanjeeva matanduru talk
ಸಂಜೀವ ಮಠಂದೂರು

By

Published : Feb 9, 2021, 6:36 PM IST

Updated : Feb 9, 2021, 7:17 PM IST

ಪುತ್ತೂರು :ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತರುವ ಮೂಲಕ ಕಟ್ಟಕಡೆಯ ವ್ಯಕ್ತಿಗೂ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ. ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳು ಬಡರೋಗಿಗಳ ಆಶಾಕಿರಣಗಳಾಗಿವೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಶಾಸಕ ಸಂಜೀವ ಮಠಂದೂರು

ಓದಿ: ತಳ್ಳುಗಾಡಿ ತರಕಾರಿ ವ್ಯಾಪಾರಿಗಳ ಪಾಲಿಗೆ ವರವಾದ ‘ಅರ್ಕಾ ಟ್ರೈಸೈಕಲ್’

ನಗರದ ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ 18ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಆರಂಭವಾದ ಪ್ರಗತಿ ಹಾಸ್ಪಿಟಲ್ ಎಮರ್ಜೆನ್ಸಿ ಮೆಡಿಸಿನ್ ಘಟಕ ಉದ್ಘಾಟಿಸಿದರು.

ಅತೀ ಅಗತ್ಯ, ಪ್ರಸಕ್ತ ಸಂದರ್ಭದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆಯು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಗತಿ ಆಸ್ಪತ್ರೆಯು ಪುತ್ತೂರಿನ ಜನರಿಗೆ ಹೊಸ ಸೌಲಭ್ಯ ನೀಡಿದೆ. ತೀವ್ರ ನಿಗಾ ವ್ಯವಸ್ಥೆ ಇರುವ ಆ್ಯಂಬುಲೆನ್ಸ್ ಸೇವೆಯನ್ನು ಮಂಗಳೂರು ಕೆಎಂಸಿಯ ಸಹಯೋಗದಲ್ಲಿ ಆರಂಭಿಸಿದೆ.

ವೈದ್ಯಕೀಯ ಅಗತ್ಯಗಳನ್ನು ಕಲ್ಪಿಸಿಕೊಟ್ಟ ಪ್ರಗತಿ ಆಸ್ಪತ್ರೆಯ ಡಾ. ಯು ಶ್ರೀಪತಿ ರಾವ್ ಮತ್ತು ಡಾ. ಸುಧಾ ಎಸ್ ರಾವ್ ದಂಪತಿಯನ್ನು ಪ್ರಶಂಸಿಸಿದರು. ಈ ಸಂದರ್ಭ ಪ್ರಗತಿ ಪ್ಯಾರಾ ಮೆಡಿಕಲ್ ಸಂಸ್ಥೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ದೀಕ್ಷಿತಾ ಅವರನ್ನು ಶಾಸಕ ಮಠಂದೂರು ಸನ್ಮಾನಿಸಿದರು.

ವೇದಿಕೆಯಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆನಂದ ವೇಣುಗೋಪಾಲ್, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಯು ಶ್ರೀಪತಿ ರಾವ್, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸುಧಾ ಎಸ್. ರಾವ್ ಮುಖ್ಯ ಅತಿಥಿಗಳಾಗಿದ್ದ ರೋಟರಿ ಜಿಲ್ಲಾ ಗವರ್ನರ್ ಎಂ. ರಂಗನಾಥ್ ಭಟ್ ಇತರರು ಉಪಸ್ಥಿತರಿದ್ದರು.

Last Updated : Feb 9, 2021, 7:17 PM IST

ABOUT THE AUTHOR

...view details