ತುಮಕೂರು: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಆಗ್ರಹಿಸಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಕ್ಕಳ ಮೆದುಳಿನಲ್ಲಿ ವಿಷವನ್ನು, ದ್ವೇಷವನ್ನು ತುಂಬಿಸಿ ಭಾವನಾತ್ಮಕ ವಾದಂತಹ ಮತ್ತು ಧಾರ್ಮಿಕವಾದಂತಹ ವ್ಯವಸ್ಥೆಯಲ್ಲಿ ಹೋಗುತ್ತಿರುವ ಬಿಜೆಪಿಯವರು ಯಾವ ಕಾರಣಕ್ಕಾಗಿ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಅವರನ್ನು ಪಾರು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಬೇಕು: ಶಾಸಕ ರಂಗನಾಥ್ ಆಗ್ರಹ - Rohit chakratirtha
ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ರಂಗನಾಥ್ ಆಗ್ರಹಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಈ ನಾಡಿನ ತಂದೆಯಿದ್ದಂತೆ, ಅಂತಹವರಿಗೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವಮಾನ ಮಾಡಿದ್ದಾರೆ ಎಂದರೆ ನಾಡಿನ ಪ್ರತಿಯೊಬ್ಬ ಪ್ರಜೆಗೂ ನೋವಾಗುವುದಿಲ್ಲವೇ. ಕುವೆಂಪು ಅವರನ್ನು ಅವಹೇಳನ ಮಾಡಿರುವುದು ಶ್ರೀ ಆದಿಚುಂಚನಗಿರಿ ಸ್ವಾಮೀಜಿಯವರಿಗೆ ಸಾಕಷ್ಟು ನೋವು ತಂದಿದೆ. ಸ್ವಾಮೀಜಿಯವರು ಯಾವತ್ತೂ ಕೂಡ ಹೀಗೆ ನೇರವಾಗಿ ಬಂದು ಮಾತನಾಡಿರುವ ವ್ಯಕ್ತಿಯಲ್ಲ. ಬಿಜೆಪಿ ಸರ್ಕಾರ ಯಾವ ನಿಟ್ಟಿನಲ್ಲಿ ಹೋಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದರು.
ಇದನ್ನೂ ಓದಿ:ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ದೂರು